ಕಾವೇರಿ ನದಿಗೆ ಹಾರಿ ಆತ್ಮ*ತ್ಯೆಗೆ ಯತ್ನಿಸಿದ್ದ ವೃದ್ಧೆಯನ್ನು ಸ್ಥಳೀಯರು ನದಿಯಿಂದ ಮೇಲೆತ್ತಿ ರಕ್ಷಣೆ ಮಾಡಿದ ಘಟನೆ ಶ್ರೀರಂಗಪಟ್ಟಣದ ಉತ್ತರ ಕಾವೇರಿಯ ವೆಲ್ಲೆಸ್ಲೀ ಸೇತುವೆ ಬಳಿ ಬುಧವಾರ ನಡೆದಿದೆ.

ಶ್ರೀರಂಗಪಟ್ಟಣ : ಕಾವೇರಿ ನದಿಗೆ ಹಾರಿ ಆತ್ಮ*ತ್ಯೆಗೆ ಯತ್ನಿಸಿದ್ದ ವೃದ್ಧೆಯನ್ನು ಸ್ಥಳೀಯರು ನದಿಯಿಂದ ಮೇಲೆತ್ತಿ ರಕ್ಷಣೆ ಮಾಡಿದ ಘಟನೆ ಪಟ್ಟಣದ ಉತ್ತರ ಕಾವೇರಿಯ ವೆಲ್ಲೆಸ್ಲೀ ಸೇತುವೆ ಬಳಿ ಬುಧವಾರ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಚಾಮರಾಜನಗರ ನಗರದ ಬೆಂಡರವಾಡಿಯ ಗುಂಡಮ್ಮ (78) ಆತ್ಮ*ತ್ಯೆಗೆ ಯತ್ನಿಸಿದ್ದ ವೃದ್ಧೆ ಎಂದು ತಿಳಿದು ಬಂದಿದೆ.

ಕುಟುಂಬ ಕಲಹದಿಂದ ಬೇಸತ್ತ ವೃದ್ಧೆ

ಈಕೆ ಕುಟುಂಬ ಕಲಹದಿಂದ ಬೇಸತ್ತು ಶ್ರೀರಂಗಪಟ್ಟಣಕ್ಕೆ ಬಂದು ಕಾವೇರಿ ನದಿಗೆ ಬಿದ್ದು ಆತ್ಮ8ತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ನದಿಯಲ್ಲಿ ನೀರಿ ಪ್ರಮಾಣ ಕಡಿಮೆ ಇದ್ದ ಕಾರಣ ನೀರಲ್ಲಿ ಸಂಪೂರ್ಣವಾಗಿ ಮುಳುಗಲು ಸಾಧ್ಯವಾಗಿಲ್ಲ. ಸೇತುವೆ ಮೇಲೆ ಹೋಗುತ್ತಿದ್ದ ಸ್ಥಳೀಯರಾದ ವಿ.ಸುರೇಶ್ ಹಾಗೂ ಕಿಸಾರ್ ಆಹಮದ್ ಅವರು ನದಿಗೆ ಇಳಿದು ವೃದ್ಧೆಯನ್ನು ರಕ್ಷಣೆ ಮಾಡಿದ್ದಾರೆ.

ನಂತರ ನದಿಯಿಂದ ದಡಕ್ಕೆ ಆಕೆಯನ್ನು ಕರೆ ತಂದು ಸಮಾಧಾನ ಪಡಿಸಿ ಉಪಚಾರ ಮಾಡಿದ ನಂತರ ಅವರಿಂದ ವಿಳಾಸ ಹಾಗೂ ಮಾಹಿತಿ ಪಡೆದು ದೂರವಾಣಿ ಮೂಲಕ ಮನೆ ವಿಷಯ ತಿಳಿಸಿ ಸ್ಥಳಿಯ ಪೊಲೀಸರಿಗೂ ಸಹ ಮಾಹಿತಿ ನೀಡಿದ್ದಾರೆ.

ಅಷ್ಟರಲ್ಲಿ ವೃದ್ಧೆಯ ಮೊಮ್ಮಗ ಪೊಲೀಸ್ ಠಾಣೆಗೆ ಆಗಮಿಸಿ ತಮ್ಮ ಅಜ್ಜಿ ಮಾಹಿತಿ ಪಡೆದು ಸಮಧಾನ ಪಡಿಸಿ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಈ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರು ಡಿಕ್ಕಿಯಾಗಿ ಯುವಕ ಸಾವು

ಕಿಕ್ಕೇರಿ: ಆಟೋದಲ್ಲಿ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಹಿಂಬದಿಯಿಂದ ಕಾರು ಡಿಕ್ಕಿಯಾಗಿ ಯುವಕ ಮೃತಪಟ್ಟಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ಹೋಬಳಿಯ ಲಕ್ಷ್ಮೀಪುರ ಗ್ರಾಮದ ಕೃಷ್ಣೇಗೌಡರ ಪುತ್ರ ಎಲ್.ಕೆ.ನೀರಜ್‌ಗೌಡ(20) ಅಪಘಾತದಿಂದ ಮೃತನಾದ ಯುವಕ. ಬೆಂಗಳೂರಿನಲ್ಲಿ ಆಟೋ ಚಾಲಕನಾಗಿದ್ದ ನೀರಜ್ ಗೌಡ ಆಟೋದಲ್ಲಿ ತೆರಳುತ್ತಿದ್ದಾಗ ಹಿಂಬದಿಯಿಂದ ಕಾರು ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದನು. ತುರ್ತು ಚಿಕಿತ್ಸೆಗಾಗಿ ಈತನನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಮೃತನ ನೇತ್ರದಾನ ಮಾಡಲು ಹೈಕೋರ್ಟ್ ನಲ್ಲಿ ಸರ್ಕಾರಿ ಅಪರ ವಕೀಲ ಕಿಕ್ಕೇರಿಯ ಕೆ.ಪಿ.ಯೋಗಣ್ಣ ಮೃತ ಕುಟುಂಬದವರಿಗೆ ಮನವೊಲಿಸಿ ಮೃತನ ಶರೀರವನ್ನು ಪಂಚನಾಮೆ ನಡೆಸಿ ಸ್ವಗ್ರಾಮಕ್ಕೆ ರವಾನಿಸಲು ಕಾಳಜಿ ವಹಿಸಿದರು. ಮೃತನ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.