ಲಂಡನ್(ಜು.23): ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗಿರೋ ಟೀಂ ಇಂಡಿಯಾ ವೇಗಿ ಇಶಾಂತ್ ಶರ್ಮಾ ಇದೀಗ ಟೀಂ ಇಂಡಿಯಾ ಸೇರಿಕೊಂಡಿದ್ದಾರೆ. ಇಶಾಂತ್ ಶರ್ಮಾ ಹೆಚ್ಚಾಗಿ ಉದ್ದ ಕೂದಲಿನಿಂದಲೇ ಗುರುತಿಸಿಕೊಂಡಿದ್ದಾರೆ. ಆದರೆ ಇದೀಗ ಇಶಾಂತ್ ತಮ್ಮ ಕೂದಲಿಗೆ ಕತ್ತರಿ ಹಾಕಿ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

 

 

ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಕೆಲವೇ ವರ್ಷಗಳಲ್ಲಿ ಇಶಾಂತ್ ಶರ್ಮಾ ತಮ್ಮ ಲಾಂಗ್ ಹೇರ್‌ನಿಂದ ಗಮನಸೆಳೆದಿದ್ದರು. ಬಳಿಕ ಯಾರೇ ಹೇಳಿದರೂ ಉದ್ದ ಕೂದಲಿಗೆ ಮಾತ್ರ ಕತ್ತರಿ ಹಾಕಿರಲಿಲ್ಲ. ಇಶಾಂತ್ ತಮ್ಮ ಮದುವೆಯಲ್ಲೂ ಉದ್ದ ಕೂದಲಿನಿಂದಲೇ ಮಿಂಚಿದ್ದರು.

 

 

Training partner!!@pratima0808

A post shared by Ishant.sharma (@ishant.sharma29) on Jul 11, 2018 at 12:19am PDT

 

ಲಾಂಗ್ ಹೇರ್ ಮೂಲಕ ಗಮನಸೆಳೆದಿದ್ದ ಇಶಾಂತ್ ಇದೀಗ ಶಾರ್ಟ್ ಮಾಡಿಸಿಕೊಂಡಿದ್ದಾರೆ. ಇಶಾಂತ್ ಶರ್ಮಾ ನೂತನ ಹೇರ್ ಸ್ಟೈಲ್ ಇದೀಗ ಟ್ರೆಂಡ್ ಆಗಿದೆ. ಶಾರ್ಟ್ ಹೇರ್ ಜೊತೆಗೆ ಬಿಯರ್ಡ್ ಕೂಡ ಬಿಟ್ಟಿರುವ ಇಶಾಂತ್ ಹೊಸ ಲುಕ್ ಆಕರ್ಷಕವಾಗಿದೆ.

 

 

ಇದನ್ನು ಓದಿ: ಟೀಂ ಇಂಡಿಯಾ ಕ್ರಿಕೆಟಿಗರಿಗೆ ಬಿಸಿಸಿಐ ನೀಡಿತು ಬಿಗ್ ಶಾಕ್!