ಹೈದ​ರಾ​ಬಾದ್‌[ಸೆ.15]: ಐಸಿಸಿ ಏಕ​ದಿನ ವಿಶ್ವ​ಕಪ್‌ಗೆ ಆಯ್ಕೆಯಾಗದಕ್ಕೆ ಬೇಸರಗೊಂಡು ಅಂತಾ​ರಾ​ಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಅಂಬಟಿ ರಾಯು​ಡು, ಇತ್ತೀ​ಚೆಗಷ್ಟೇ ನಿವೃ​ತ್ತಿ​ಯಿಂದ ಹೊರ​ಬಂದಿ​ದ್ದರು. ಅವರಿಗೀಗ ಅದೃಷ್ಟ ಕೂಡಿಬಂದಿದೆ.

ವಿದಾಯ ನಿರ್ಧಾರ ಬದಲು; 2 ತಿಂಗಳ ಬಳಿಕ U ಟರ್ನ್ ಹೊಡೆದ ರಾಯುಡು!

ಹೌದು, ಮುಂಬ​ರುವ ವಿಜಯ್‌ ಹಜಾರೆ ಟ್ರೋಫಿ​ಯಲ್ಲಿ ಅಂಬಟಿ ರಾಯುಡುಗೆ ಹೈದ​ರಾ​ಬಾದ್‌ ತಂಡ​ದ ನಾಯಕತ್ವ ಪಟ್ಟ ನೀಡಲಾಗಿದೆ. ಅಕ್ಷತ್‌ ರೆಡ್ಡಿ ಬದ​ಲಿಗೆ ರಾಯು​ಡು ನಾಯ​ಕ​ನಾಗಿ ನೇಮ​ಕ​ಗೊಂಡಿ​ದ್ದಾರೆ. ‘ರಾ​ಯುಡು ಅವ​ರಲ್ಲಿ ಇನ್ನೂ 5 ವರ್ಷ ಕ್ರಿಕೆಟ್‌ ಬಾಕಿ ಇದೆ’ ಎಂದು ಹೈದ​ರಾ​ಬಾದ್‌ ಕ್ರಿಕೆಟ್‌ ಸಂಸ್ಥೆಯ ಆಯ್ಕೆಗಾರ ನೋಲ್‌ ಡೇವಿಡ್‌ ಹೇಳಿ​ದ್ದಾರೆ. ಈ ತಿಂಗಳು 24ರಿಂದ ವಿಜಯ್‌ ಹಜಾರೆ ಟೂರ್ನಿ ಆರಂಭ​ಗೊ​ಳ್ಳ​ಲಿದೆ.

ವಿಜಯ್ ಹಜಾರೆ ಟ್ರೋಫಿಗೆ ದೆಹಲಿ ಸಂಭಾವ್ಯ ತಂಡ ಪ್ರಕಟ; ಕೊಹ್ಲಿಗೆ ಸ್ಥಾನ!

ಟೀಂ ಇಂಡಿಯಾದ ದಿಗ್ಗಜ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್, ಹೈದ​ರಾ​ಬಾದ್‌ ಕ್ರಿಕೆಟ್‌ ಸಂಸ್ಥೆಯ ಆಯ್ಕೆಗಾರ ನೋಲ್‌ ಡೇವಿಡ್‌ ಹಾಗೂ ಚೆನ್ನೈ ಸೂಪರ್’ಕಿಂಗ್ಸ್ ಆಡಳಿತ ಮಂಡಳಿ ರಾಯುಡು ನಿವೃತ್ತಿ ಹಿಂಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ರಾಯುಡು ಭಾರತ ಪರ 55 ಏಕದಿನ ಹಾಗೂ 6 ಟಿ20 ಪಂದ್ಯಗಳನ್ನಾಡಿದ್ದಾರೆ.