Asianet Suvarna News Asianet Suvarna News

IPL 2020: ಹೊಸ ತಂಡದತ್ತ ಮುಖಮಾಡಿದ ರಹಾನೆ..?

ಭಾರತ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ ಮುಂಬರುವ 2020ರ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಬದಲಾಗಿ ಹೊಸ ತಂಡದತ್ತ ಮುಖ ಮಾಡಿದ್ದಾರೆ. ಅಷ್ಟಕ್ಕೂ ಯಾವ ತಂಡದ ಪರ ರಹಾನೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...  

Team India Cricketer Ajinkya Rahane may complete move to Delhi Capitals in IPL 2020
Author
New Delhi, First Published Aug 13, 2019, 4:54 PM IST

ನವದೆಹಲಿ[ಆ.13]: 2020ರ ಐಪಿಎಲ್‌ಗೆ ತಂಡಗಳು ಈಗಾಗಲೇ ಸಿದ್ಧತೆ ಆರಂಭಿಸಿದ್ದು, ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಬಲಿಷ್ಠ ತಂಡ ರಚಿಸಿಕೊಳ್ಳುವತ್ತ ಗಮನ ಹರಿಸಿದೆ. 

ಇತ್ತೀಚೆಗಷ್ಟೇ ಆಲ್ರೌಂಡರ್‌ ಶೆರ್ಫಾನೆ ರುಥರ್‌ಫೋರ್ಡ್‌ರನ್ನು ಮುಂಬೈ ಇಂಡಿಯನ್ಸ್‌ಗೆ ಬಿಟ್ಟುಕೊಟ್ಟು ಯುವ ಲೆಗ್‌ ಸ್ಪಿನ್ನರ್‌ ಮಯಾಂಕ್‌ ಮರ್ಕಂಡೆಯನ್ನು ಸೇರಿಸಿಕೊಂಡಿದ್ದ ಡೆಲ್ಲಿ ತಂಡ, ಇದೀಗ ಭಾರತ ಟೆಸ್ಟ್‌ ತಂಡದ ಉಪನಾಯಕ ಅಜಿಂಕ್ಯ ರಹಾನೆಯನ್ನು ತಂಡಕ್ಕೆ ಸೇರಿಸಿಕೊಳ್ಳಲು ಪ್ರಯತ್ನ ಆರಂಭಿಸಿದೆ. ರಾಜಸ್ಥಾನ ರಾಯಲ್ಸ್‌ ತಂಡದೊಂದಿಗೆ ಡೆಲ್ಲಿ ತಂಡದ ಆಡಳಿತ ಮಾತುಕತೆ ನಡೆಸುತ್ತಿದೆ ಎಂದು ವರದಿಯಾಗಿದೆ.

ಮಯಾಂಕ್ ಕೈಬಿಟ್ಟು, ಡೆಲ್ಲಿ ಬ್ಯಾಟ್ಸ್‌ಮನ್ ಖರೀದಿಸಿದ ಮುಂಬೈ !

ಮುಂಬೈ ಇಂಡಿಯನ್ಸ್ ಪರವಾಗಿ ಐಪಿಎಲ್ ಟೂರ್ನಿಯಲ್ಲಿ ಪದಾರ್ಪಣೆ ಮಾಡಿದ ರಹಾನೆ, 2011ರಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಸೇರಿಕೊಂಡಿದ್ದರು. ರಾಜಸ್ಥಾನ ರಾಯಲ್ಸ್ ತಂಡ 2 ವರ್ಷ ನಿಷೇಧಕ್ಕೊಳಗಾದಾಗ ಪುಣೆ ತಂಡದ ಪರವಾಗಿ ಕಾಣಿಸಿಕೊಂಡಿದ್ದರು. ನಿಷೇಧದ ಬಳಿಕ ಮತ್ತೆ ರಾಜಸ್ತಾನ ಐಪಿಎಲ್’ಗೆ ಮರಳಿದಾಗ ರಹಾನೆ ಕೂಡಾ ರಾಯಲ್ಸ್ ತಂಡ ಕೂಡಿಕೊಂಡಿದ್ದರು. ಕೆಲಕಾಲ ತಂಡವನ್ನು ಮುನ್ನಡೆಸಿದ್ದರು. ಇದೀಗ ರಾಜಸ್ಥಾನ ತಂಡ ತೊರೆಯಲು ಮುಂದಾಗಿದ್ದಾರೆ.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Follow Us:
Download App:
  • android
  • ios