ಟೀಂ ಇಂಡಿಯಾ ನವೆಂಬರ್ 21ರಿಂದ ಜನವರಿ 18ರವರೆಗೆ ಆಸ್ಟ್ರೇಲಿಯಾ ವಿರುದ್ಧ 3 ಟಿ20, 4 ಟೆಸ್ಟ್ ಹಾಗೂ 3 ಏಕದಿನ ಪಂದ್ಯಗಳ ಸರಣಿ ಆಡಲಿದೆ. 

ಮುಂಬೈ[ನ.16]: ಆಸ್ಟ್ರೇಲಿಯಾ ಪ್ರವಾಸದ ವೇಳೆ ಎದುರಾಳಿ ಆಟಗಾರರು ಸ್ಲೆಡ್ಜಿಂಗ್ ನಡೆಸಿದರೆ ನಾವು ಅದಕ್ಕೆ ತಕ್ಕ ಉತ್ತರ ನೀಡಲು ಸಿದ್ಧರಿದ್ದೇವೆ. ಆದರೆ ನಾವಾಗೇ ಮಾತಿನ ಚಕಮಕಿಯಲ್ಲಿ
ತೊಡಗುವುದಿಲ್ಲ ಎಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆಸ್ಟ್ರೇಲಿಯಾ ಸರಣಿಗೆ ಟೀಂ ಇಂಡಿಯಾ ಪ್ರಕಟ

ಇಂದು ಆಸ್ಟ್ರೇಲಿಯಾಗೆ ಭಾರತ ತಂಡ ಹೊರಡಲಿದ್ದು, ಗುರುವಾರ ಇಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಆಸ್ಟ್ರೇಲಿಯಾದಲ್ಲಿ ಎದುರಾಗುವ ಸವಾಲಿಗೆ ತಂಡ ಸಿದ್ಧವಿರುವುದಾಗಿ ಕೊಹ್ಲಿ ಹೇಳಿದರು. ಇದೇ ವೇಳೆ ಕೋಚ್ ರವಿಶಾಸ್ತ್ರಿ, ಮುಂಬರುವ ವಿಶ್ವಕಪ್’ವರೆಗೂ ತಂಡದಲ್ಲಿ ಪದೇ ಪದೇ ಬದಲಾವಣೆ ಮಾಡುವುದಿಲ್ಲ ಎಂದಿದ್ದಾರೆ.

ಟೀಂ ಇಂಡಿಯಾ ಎದುರಿನ ಟಿ20 ಸರಣಿಗೆ ಬಲಿಷ್ಠ ಆಸೀಸ್ ತಂಡ ಪ್ರಕಟ

ಟೀಂ ಇಂಡಿಯಾ ನವೆಂಬರ್ 21ರಿಂದ ಜನವರಿ 18ರವರೆಗೆ ಆಸ್ಟ್ರೇಲಿಯಾ ವಿರುದ್ಧ 3 ಟಿ20, 4 ಟೆಸ್ಟ್ ಹಾಗೂ 3 ಏಕದಿನ ಪಂದ್ಯಗಳ ಸರಣಿ ಆಡಲಿದೆ.