ಭಾರತ ಶ್ರೀಲಂಕಾ ನಡುವಿನ ಎರಡನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆರಿಸಿಕೊಂಡಿದೆ. ಕನ್ನಡಿಗ ಕೆ.ಎಲ್ ರಾಹುಲ್ ತಂಡ ಕೂಡಿಕೊಂಡಿದ್ದಾರೆ.

ಮಳೆಯ ಕಾರಣದಿಂದ ಒಂದು ಓವರ್ ಕಡಿತ ಮಾಡಲಾಗಿದ್ದು, 19 ಓವರ್'ಗಳ ಪಂದ್ಯ ನಡೆಯಲಿದೆ. ಈಗಾಗಲೇ ಮೊದಲ ಪಂದ್ಯದಲ್ಲಿ ಲಂಕಾ ವಿರುದ್ಧ ಮುಗ್ಗರಿಸಿದ್ದ ಟೀಂ ಇಂಡಿಯಾ ತಿರುಗೇಟು ನೀಡಲು ಸಜ್ಜಾಗಿದೆ.

ಇನ್ನು ಶ್ರೀಲಂಕಾ ಕೂಡಾ ಒಂದು ಬದಲಾವಣೆ ಮಾಡಲಾಗಿದ್ದು, ದಿನೇಶ್ ಚಾಂಡಿಮಲ್ ಬದಲು ಸುರಂಗಾ ಲಕ್ಮಲ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.