ನವದೆಹಲಿ(ಜು.29): ಆಗಸ್ಟ್‌ 3 ರಿಂದ ಸುಮಾರು ಒಂದು ತಿಂಗಳುಗಳ ಕಾಲ ನಡೆಯಲಿರುವ ವೆಸ್ಟ್‌ ಇಂಡೀಸ್‌ ಪ್ರವಾಸಕ್ಕಾಗಿ ಭಾರತ ಕ್ರಿಕೆಟ್‌ ತಂಡ ಸೋಮವಾರ ವಿಂಡೀಸ್‌ಗೆ ಪ್ರಯಾಣ ಬೆಳೆಸಲಿದೆ. ಕೆರಿಬಿಯನ್‌ ಪ್ರವಾಸದಲ್ಲಿ ಭಾರತ ತಂಡ, 3 ಟಿ20, 3 ಏಕದಿನ ಹಾಗೂ 2 ಟೆಸ್ಟ್‌ ಪಂದ್ಯಗಳನ್ನು ಆಡಲಿದೆ.

ಡ್ರೆಸ್ಸಿಂಗ್ ರೂಂ ಗುದ್ದಾಟ; ವಿಂಡೀಸ್ ಪ್ರವಾಸದ ಸುದ್ದಿಗೋಷ್ಠಿಗೆ ಕೊಹ್ಲಿ ಗೈರು?

ಸುದ್ದಿಗೋಷ್ಠಿ ಅನುಮಾನ:

ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಹಾಗೂ ಉಪ ನಾಯಕ ರೋಹಿತ್‌ ಶರ್ಮಾ ಅವರ ನಡುವೆ ನಡೆದಿದೆ ಎನ್ನಲಾದ ಒಳಜಗಳದ ಕಾರಣದಿಂದಾಗಿ ವಿಂಡೀಸ್‌ ಪ್ರವಾಸಕ್ಕೆ ತೆರಳುವ ಮುನ್ನ ನಡೆಸಬೇಕಿದ್ದ ಸುದ್ದಿಗೋಷ್ಠಿ ರದ್ದಾಗಿದೆ ಬಿಸಿಸಿಐ ಮೂಲಗಳು ತಿಳಿಸಿವೆ ಎಂದು ವದಂತಿ ಹಬ್ಬಿಸಲಾಗಿದೆ. ಆದರೆ ಕೆಲ ಆಂಗ್ಲ ಮಾಧ್ಯಮಗಳ ಪ್ರಕಾರ ಭಾರತ ತಂಡ, ಸುದ್ದಿಗೋಷ್ಠಿ ನಡೆಸಿ ತೆರಳಲಿದ್ದಾರೆ ಎಂದು ವರದಿ ಮಾಡಿವೆ.

ಭಾರತ ಎದುರಿನ ಟಿ20 ಸರಣಿಗೆ ಬಲಿಷ್ಠ ವೆಸ್ಟ್ ಇಂಡೀಸ್ ತಂಡ ಪ್ರಕಟ

ಸುದ್ದಿಗೋಷ್ಠಿ ಯಾವ ಕಾರಣಕ್ಕೆ ನಡೆಯುವುದಿಲ್ಲ ಎನ್ನುವುದಾದರೆ, ಕೊಹ್ಲಿ ಹಾಗೂ ರೋಹಿತ್‌ ನಡುವಿನ ಬಿರುಕಿನ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಧ್ಯಮಗಳು ಸಂಭಾವ್ಯ ಪ್ರಶ್ನೆ ಎತ್ತಲಿವೆ. ಈ ಮುಜುಗರ ತಪ್ಪಿಸಿಕೊಳ್ಳುವ ಉದ್ದೇಶದಿಂದ ಕೊಹ್ಲಿ ಸುದ್ದಿಗೋಷ್ಠಿಯನ್ನು ನಡೆಸಲು ಹಿಂಜರಿಯುತ್ತಿದ್ದಾರೆ ಎಂದು ಸುದ್ದಿ ಆಗಿದೆ. ಆದರೆ ಈ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲ.

ಟೀಂ ಇಂಡಿಯಾ ವಿಂಡೀಸ್‌ ಪ್ರವಾಸ: ವೇಳಾಪಟ್ಟಿ ಪ್ರಕಟ