Asianet Suvarna News Asianet Suvarna News

ಡ್ರೆಸ್ಸಿಂಗ್ ರೂಂ ಗುದ್ದಾಟ; ವಿಂಡೀಸ್ ಪ್ರವಾಸದ ಸುದ್ದಿಗೋಷ್ಠಿಗೆ ಕೊಹ್ಲಿ ಗೈರು?

ರೋಹಿತ್ ಶರ್ಮಾ ಹಾಗೂ ನಾಯಕ ವಿರಾಟ್ ಕೊಹ್ಲಿ ನಡುವೆ ಕೋಲ್ಡ್ ವಾರ್ ನಡೆಯುತ್ತಿದೆ ಅನ್ನೋ ಮಾತುಗಳು ಬಲವಾಗುತ್ತಿದೆ. ಇದೀಗ ವೆಸ್ಟ್ ಇಂಡೀಸ್ ಪ್ರವಾಸಕ್ಕೂ ಮುನ್ನ ಆಯೋಜಿಸಿರುವ ಸುದ್ದಿಗೋಷ್ಠಿಗೆ ವಿರಾಟ್ ಕೊಹ್ಲಿ ಗೈಲರಾಗಲಿದ್ದಾರೆ

Dressing room cold war Virat kohli to miss pre departure press conference
Author
Bengaluru, First Published Jul 28, 2019, 11:38 AM IST
  • Facebook
  • Twitter
  • Whatsapp

ಮುಂಬೈ(ಜು.28): ವಿಶ್ವಕಪ್ ಟೂರ್ನಿ ಸೋಲಿನ ಬಳಿಕ ಟೀಂ ಇಂಡಿಯಾದಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಬಹಿರಂಗವಾಗುತ್ತಿದೆ. ಡ್ರೆಸ್ಸಿಂಗ್ ರೂಂನಲ್ಲಿ ಮುಸುಕಿನ ಗುದ್ದಾಟ ನಡೆಯುತ್ತಿದೆಯಾ ಅನ್ನೋ ಮಾತಿಗೆ ಹಲವು ಪುರಾವೆಗಳು ಸಿಕ್ಕಿವೆ. ನಾಯಕತ್ವ ವಿಚಾರದಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ನಡುವೆ ಕೋಲ್ಡ್ ವಾರ್ ನಡೆಯುತ್ತಿದೆ ಅನ್ನೋ ಮಾತುಗಳು ಕೇಳಿ ಬರುತ್ತಿದೆ. ಇದರ ಬೆನ್ನಲ್ಲೇ ಇದೀಗ ವೆಸ್ಟ್ ಇಂಡೀಸ್ ಪ್ರವಾಸಕ್ಕೂ ಮುನ್ನ ಆಯೋಜಿಸಿರುವ ಸುದ್ಧಿಗೋಷ್ಠಿಗೆ ವಿರಾಟ್ ಕೊಹ್ಲಿ ಗೈರಾಗಲಿದ್ದಾರೆ.

ಇದನ್ನೂ ಓದಿ: ಕೊಹ್ಲಿ -ರೋಹಿತ್ ನಡುವೆ ವಾರ್; ಸೀಕ್ರೆಟ್ ಬಿಚ್ಚಿಟ್ಟ ಅನುಷ್ಕಾ ಶರ್ಮಾ!

ಪ್ರತಿ ಸರಣಿಗೂ ಮುನ್ನ, ಪ್ರತಿ ಪ್ರವಾಸಕ್ಕೂ ಮುನ್ನ ಟೀಂ ಇಂಡಿಯಾ ನಾಯಕ ಹಾಗೂ ಕೋಚ್ ಮಾಧ್ಯಮದ ಜೊತೆ ಸಂವಾದ ನಡೆಸುವ ಸಂಪ್ರದಾಯವಿದೆ. ಆದರೆ ಇದೇ ಮೊದಲ ಬಾರಿಗೆ ನಾಯಕ ವಿರಾಟ್ ಕೊಹ್ಲಿ ಪ್ರವಾಸಕ್ಕೂ ಮುನ್ನ ಆಯೋಜಿಸಿರುವ ಸುದ್ದಿಗೋಷ್ಠಿಗೆ ಗೈರಾಗಾಲಿದ್ದಾರೆ ಅನ್ನೋ ಮಾಹಿತಿ ಹೊರಬಿದಿದ್ದೆ.

ಇದನ್ನೂ ಓದಿ: ರೋಹಿತ್‌ಗೆ ಏಕದಿನ,ಟಿ20 ನಾಯಕತ್ವ; ಕೊಹ್ಲಿಗೆ ಟೆಸ್ಟ್ ಮಾತ್ರ?

ಸೋಮವಾರ(ಜು. 29) ಟೀಂ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ದದ ಸರಣಿಗಾಗಿ ಅಮೆರಿಕಾ ಪ್ರಯಾಣ ಬೆಳೆಸಲಿದೆ. ಆರಂಭಿಕ 2 ಟಿ20 ಪಂದ್ಯದ ಬಳಿಕ ಅಂತಿಮ ಟಿ20 ಹಾಗೂ 3 ಏಕದಿನ , 2 ಟೆಸ್ಟ್ ಪಂದ್ಯಕ್ಕಾಗಿ ವೆಸ್ಟ್ ಇಂಡೀಸ್‌ಗೆ ತೆರಳಲಿದೆ. ಆಗಸ್ಟ್ 3 ರಿಂದ ವಿಂಡೀಸ್ ವಿರುದ್ಧದ ಸರಣಿ ಆರಂಭವಾಗಲಿದೆ.

Follow Us:
Download App:
  • android
  • ios