ಸೌತಾಂಪ್ಟನ್[ಆ.30]: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್’ನಲ್ಲಿ 6 ಸಾವಿರ ರನ್ ಪೂರೈಸಿದ ಸಾಧನೆ ಮಾಡಿದ್ದಾರೆ. ಈ ಮೂಲಕ ಭಾರತ ಪರ ಆರು ಸಾವಿರ ರನ್ ಪೂರೈಸಿದ 10ನೇ ಕ್ರಿಕೆಟಿಗ ಎನ್ನುವ ಕೀರ್ತಿಗೆ ಕೊಹ್ಲಿ ಪಾತ್ರರಾಗಿದ್ದಾರೆ.

ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟೆಸ್ಟ್ ಆಡುತ್ತಿರುವ ವಿರಾಟ್ ಕೊಹ್ಲಿಗೆ ಆರು ಸಾವಿರ ರನ್ ಪೂರೈಸಲು ಕೇವಲ 6 ರನ್’ಗಳ ಅವಶ್ಯಕತೆಯಿತ್ತು. ಜೇಮ್ಸ್ ಆ್ಯಂಡರ್’ಸನ್ ಬೌಲಿಮಗ್’ನಲ್ಲಿ ಬೌಂಡರಿ ಬಾರಿಸುವುದರೊಂದಿಗೆ ಆರು ಸಾವಿರ ರನ್ ಪೂರೈಸಿದ್ದಾರೆ. ಈ ಮೂಲಕ ಸುನಿಲ್ ಗವಾಸ್ಕರ್ ಬಳಿಕ ಅತಿವೇಗವಾಗಿ 6 ಸಾವಿರ ರನ್ ಪೂರೈಸಿದ ಟೀಂ ಇಂಡಿಯಾ ಬ್ಯಾಟ್ಸ್’ಮನ್ ಎನ್ನುವ ಶ್ರೇಯಕ್ಕೆ ಕೊಹ್ಲಿ ಪಾತ್ರರಾಗಿದ್ದಾರೆ.

ಸುನಿಲ್ ಗವಾಸ್ಕರ್ 117 ಇನ್ನಿಂಗ್ಸ್’ಗಳಲ್ಲಿ 6 ಸಾವಿರ ರನ್ ಪೂರೈಸಿದ್ದರೆ, ಕೊಹ್ಲಿ 119 ಇನ್ನಿಂಗ್ಸ್’ಗಳಲ್ಲಿ ಈ ಸಾಧನೆ ಮಾಡಿದ್ದಾರೆ.