Asianet Suvarna News Asianet Suvarna News

ಭುವನೇಶ್ವರ್ ದಾಳಿಗೆ ತತ್ತರಿಸಿದ ವಿಂಡೀಸ್; ಭಾರತಕ್ಕೆ 59 ರನ್ ಗೆಲುವು!

ವೆಸ್ಟ್ ಇಂಡೀಸ್ ವಿರುದ್ಧದ 2ನೇ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ಹೀಗಾಗಿ ವಿಂಡೀಸ್ ತಂಡಕ್ಕೆ ಪಂದ್ಯವನ್ನು 46 ಓವರ್‌ಗಳಿಗೆ ಸೀಮಿತಗೊಳಿಸಲಾಗಿತ್ತು. ಬ್ಯಾಟಿಂಗ್‌ ಬಳಿಕ ಬೌಲಿಂಗ್‌ನಲ್ಲೂ ಟೀಂ ಇಂಡಿಯಾ ಮಿಂಚಿನ ಪ್ರದರ್ಶನ ನೀಡಿತು. ಪಂದ್ಯದ ಹೈಲೈಟ್ಸ್ ಇಲ್ಲಿದೆ.
 

Team India beat West indies by 59 runs in 2nd odi at Trinidad
Author
Bengaluru, First Published Aug 12, 2019, 4:39 AM IST

ಟ್ರಿನಿಡಾಡ್(ಆ.12): ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಡಕ್‌ ವರ್ತ್ ನಿಯಮದ ಪ್ರಕಾರ 59 ರನ್ ಗೆಲುವು ಸಾಧಿಸಿದೆ. ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು. ಹೀಗಾಗಿ 2ನೇ ಪಂದ್ಯ ಮಹತ್ವ ಪಡೆದುಕೊಂಡಿತು. ಆದರೆ ಎರಡನೇ ಪಂದ್ಯಕ್ಕೂ ಮಳೆ ಅಡ್ಡಿ ಪಡಿಸಿದರೂ, ಗೆಲುವು ಸಾಧಿಸಿತು. ಇದೀಗ  ಟೀಂ ಇಂಡಿಯಾ ಅಂತಿಮ ಹಾಗೂ 3ನೇ ಏಕದಿನ ಪಂದ್ಯ ಗೆದ್ದು ಸರಣಿ  ವಶಪಡಿಸಿಕೊಳ್ಳಲು ಕಾತರಗೊಂಡಿದೆ. ಆದರೆ ಆತಿಥೇಯ ವಿಂಡೀಸ್ ತಂಡಕ್ಕೆ ಸರಣಿ ಸಮಬಲದ ಆಯ್ಕೆ ಮಾತ್ರ ಉಳಿದಿದೆ.

2ನೇ ಏಕದಿನ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಶತಕ ಹಾಗೂ ಶ್ರೇಯಸ್ ಅಯ್ಯರ್ ಹಾಫ್ ಸೆಂಚುರಿ ನೆರವಿನಿಂದ ಟೀಂ ಇಂಡಿಯಾ 7 ವಿಕೆಟ್ ನಷ್ಟಕ್ಕೆ 279 ರನ್ ಸಿಡಿಸಿತ್ತು. ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ ಕಾರಣ ಪಂದ್ಯವನ್ನು 46 ಓವರ್‌ಗಳಿಗೆ ಸೀಮಿತಗೊಳಿಸಿ ವಿಂಡೀಸ್‌ಗೆ 270 ರನ್ ಟಾರ್ಗೆಟ್ ನೀಡಲಾಯಿತು. ಒತ್ತಡಕ್ಕೆ ಸಿಲುಕಿದ ವಿಂಡೀಸ್ ಉತ್ತಮ ಆರಂಭ ಪಡೆಯಲಿಲ್ಲ.

ಐತಿಹಾಸಿಕ 300ನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಕೇವಲ 11 ರನ್ ಸಿಡಿಸಿ ಔಟಾದರು. ಶೈ ಹೋಪ್ ಹಾಗೂ ಶಿಮ್ರೊನ್ ಹೆಟ್ಮೆಯರ್ ಕೂಡ ಆಸರೆಯಾಗಲಿಲ್ಲ. ಆದರೆ ಇವಿನ್ ಲಿವಿಸ್ ಹಾಫ್ ಸೆಂಚುರಿ ಸಿಡಿಸಿ ನೆರವಾದರು. ಲಿವಿಸ್ 65 ರನ್ ಕಾಣಿಕೆ ನೀಡಿದರೆ, ನಿಕೋಲಸ್ ಪೂರನ್ 45 ರನ್ ಸಿಡಿಸಿದರು. ರೋಸ್ಟನ್ ಚೇಸ್, ನಾಯಕ ಜೇಸನ್ ಹೋಲ್ಡರ್, ಕಾರ್ಲೋಸ್ ಬ್ರಾಥ್ವೈಟ್, ಭಾರತದ ದಾಳಿಗೆ ಉತ್ತರಿಸಲಿಲ್ಲ.

ಭುವನೇಶ್ವರ್ ಕುಮಾರ್ 4, ಮೊಹಮ್ಮದ್ ಶಮಿ ಹಾಗೂ ಕುಲ್ದೀಪ್ ಯಾದವ್ ತಲಾ 2 ವಿಕೆಟ್ ಕಬಳಿಸಿದರು. ಈ ಮೂಲಕ ವಿಂಡೀಸ್ 42 ಓವರ್‌ಗಳಲ್ಲಿ 210 ರನ್‌ಗೆ ಆಲೌಟ್ ಆಯಿತು.  59 ರನ್ ಗೆಲುವು ಸಾಧಿಸಿದ ಭಾರತ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿತು. 

Follow Us:
Download App:
  • android
  • ios