‘ಕೋಚ್ ನನ್ನ ಪ್ರತಿ ಸಾಧನೆಯ ಹಿಂದಿದ್ದಾರೆ. ನನ್ನ ಕನಸುಗಳು ನನಸಾಗಲು ಹಗಲು ರಾತ್ರಿ ದುಡಿದಿದ್ದಾರೆ. ಈ ಶಿಕ್ಷಕರ ದಿನದಂದು ನನ್ನ ಸಕಲ ಯಶಸ್ಸನ್ನೂ ಕೋಚ್‌'ಗೆ ಅರ್ಪಿಸುತ್ತೇನೆ’ಎಂದು ಸಿಂಧು ಹೇಳಿದ್ದಾರೆ.

ನವದೆಹಲಿ(ಸೆ.05): ಒಲಿಂಪಿಕ್ಸ್ ಹಾಗೂ ವಿಶ್ವ ಚಾಂಪಿಯನ್'ಶಿಪ್ ಬೆಳ್ಳಿ ಪದಕ ವಿಜೇತೆ ಪಿ.ವಿ.ಸಿಂಧು ತಮ್ಮ ಕೋಚ್ ಪಿ.ಗೋಪಿಚಂದ್ ಅವರ ಕುರಿತ ಡಿಜಿಟಲ್ ಚಿತ್ರಕ್ಕೆ ನಿರ್ಮಾಪಕಿಯಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶಿಕ್ಷಕರ ದಿನಾಚರಣೆ ಅಂಗವಾಗಿ ತಂಪು ಪಾನೀಯ ಸಂಸ್ಥೆಯೊಂದು ತರಬೇತುದಾರರ ಕುರಿತ ಕಿರುಚಿತ್ರವೊಂದನ್ನು ತಯಾರಿಸಿದೆ. ಈ ಚಿತ್ರದಲ್ಲಿ ಸಿಂಧು ಹಾಗೂ ಗೋಪಿಚಂದ್ ನಡುವಿನ ವಿಶೇಷ ಸಂಬಂಧ, ಸಿಂಧು ಯಶಸ್ಸಿನಲ್ಲಿ ಗೋಪಿಚಂದ್ ಪಾತ್ರ ಎಷ್ಟಿದೆ ಎನ್ನುವುದರ ಕುರಿತು ತೋರಿಸಲಾಗಿದೆ.

‘ಕೋಚ್ ನನ್ನ ಪ್ರತಿ ಸಾಧನೆಯ ಹಿಂದಿದ್ದಾರೆ. ನನ್ನ ಕನಸುಗಳು ನನಸಾಗಲು ಹಗಲು ರಾತ್ರಿ ದುಡಿದಿದ್ದಾರೆ. ಈ ಶಿಕ್ಷಕರ ದಿನದಂದು ನನ್ನ ಸಕಲ ಯಶಸ್ಸನ್ನೂ ಕೋಚ್‌'ಗೆ ಅರ್ಪಿಸುತ್ತೇನೆ’ಎಂದು ಸಿಂಧು ಹೇಳಿದ್ದಾರೆ.