ಕೆಲವು ದೇಶಗಳ ಆಟಗಾರರು ಗ್ಲೋಬಲ್ ಟಿ20 ಟೂರ್ನಿಯಲ್ಲಿ ಭಾಗವಹಿಸಲು ಸಿದ್ಧರಿದ್ದಾರೆ. ಆದರೆ ಭಾರತದ ಆಟಗಾರರು ಭಾಗವಹಿಸುವ ಕುರಿತಂತೆ ಸರಿಯಾಗಿ ಗೊತ್ತಿಲ್ಲ ಎಂದು ಆರ್'ಸಿಬಿ ತಂಡದ ಬ್ಯಾಟಿಂಗ್ ಆಧಾರಸ್ತಂಭವಾಗಿರುವ ಎಬಿಡಿ ಹೇಳಿದ್ದಾರೆ.

ಜೋಹಾನ್ಸ್‌ಬರ್ಗ್(ಫೆ.06): ಆಸ್ಟ್ರೇಲಿಯಾದಲ್ಲಿ ನಡೆಯುವ ಬಿಗ್‌'ಬ್ಯಾಶ್ ಟಿ20 ಲೀಗ್ ಟೂರ್ನಿಯಂತೆ, ಪ್ರಸಕ್ತ ವರ್ಷ ದ.ಆಫ್ರಿಕಾ ಕ್ರಿಕೆಟ್ ಮಂಡಳಿ ಆಯೋಜಿಸಲಿರುವ ಗ್ಲೋಬಲ್ ಟಿ20 ಲೀಗ್ ಯಶಸ್ವಿಯಾಗುವ ವಿಶ್ವಾಸವಿದೆ ಎಂದು ಆಫ್ರಿಕಾ ತಂಡದ ಆಟಗಾರ ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.

ಈ ಲೀಗ್‌'ನಿಂದ ಯುವ ಕ್ರಿಕೆಟಿಗರು ರಾಷ್ಟ್ರೀಯ ತಂಡದಲ್ಲಿ ಹೆಚ್ಚಿನ ಅವಕಾಶ ಪಡೆಯಲು ನೆರವಾಗಲಿದೆ ಎಂದು ಡಿವಿಲಿಯರ್ಸ್ ತಿಳಿಸಿದರು. ಈ ಲೀಗ್‌'ನ ಆರಂಭಕ್ಕೆ ನಾನು ಕೂಡ ಅತ್ಯಂತ ಉತ್ಸಾಹಿತನಾಗಿದ್ದೇನೆ ಎಂದು ಡಿವಿಲಿಯರ್ಸ್ ಹೇಳಿದ್ದಾರೆ.

ಇದೀಗ ಐಪಿಎಲ್ ಹೇಗೆ ಮನರಂಜನೆಯೊಂದಿಗೆ ಉತ್ತಮ ಕ್ರಿಕೆಟ್ ಆಟವನ್ನು ನೀಡುತ್ತಿದೆಯೋ ಹಾಗೆ ಗ್ಲೋಬಲ್ ಟಿ20 ಲೀಗ್ ಕೂಡ ಉತ್ತಮ ಯಶಸ್ಸು ಕಾಣಲಿದೆ ಎಂದು ಡಿವಿಲಿಯರ್ಸ್ ಹೇಳಿದರು.

ಕೆಲವು ದೇಶಗಳ ಆಟಗಾರರು ಗ್ಲೋಬಲ್ ಟಿ20 ಟೂರ್ನಿಯಲ್ಲಿ ಭಾಗವಹಿಸಲು ಸಿದ್ಧರಿದ್ದಾರೆ. ಆದರೆ ಭಾರತದ ಆಟಗಾರರು ಭಾಗವಹಿಸುವ ಕುರಿತಂತೆ ಸರಿಯಾಗಿ ಗೊತ್ತಿಲ್ಲ ಎಂದು ಆರ್'ಸಿಬಿ ತಂಡದ ಬ್ಯಾಟಿಂಗ್ ಆಧಾರಸ್ತಂಭವಾಗಿರುವ ಎಬಿಡಿ ಹೇಳಿದ್ದಾರೆ.