ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ವೆಸ್ಟ್ ಇಂಡೀಸ್ ಆಲ್ರೌಂಡರ್ ಡ್ವೇನ್ ಬ್ರಾವೋಗೆ ಇದೀಗ ನಾಯಕ ಪಟ್ಟ ನೀಡಲಾಗಿದೆ. ನೋವಿನ ವಿದಾಯ ಹೇಳಿದ ಮೇಲೆ ಬ್ರಾವೋಗೆ ನಾಯಕತ್ವ ನೀಡಿದ್ದು ಯಾರು? ಇಲ್ಲಿದೆ ಹೆಚ್ಚಿನ ವಿವರ.
ಶಾರ್ಜಾ(ನ.21): ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ವೆಸ್ಟ್ ಇಂಡೀಸ್ ಕ್ರಿಕೆಟಿಗ ಡ್ವೇನ್ ಬ್ರಾವೋ ಇದೀಗ ಟಿ10 ಕ್ರಿಕೆಟ್ ಲೀಗ್ ಟೂರ್ನಿಯ ಮರಾಥ ಅರೇಬಿಯನ್ಸ್ ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ.
;
ಡ್ವೇನ್ ಬ್ರಾವೋ ಮೊದಲ ಟಿ10 ಲೀಗ್ ಆವೃತ್ತಿಯಲ್ಲೂ ಭಾಗವಹಿಸಿದ್ದರು. ಮೊದಲ ಆವೃತ್ತಿಯಲ್ಲಿ 6 ತಂಡಗಳಿದ್ದ ಟೂರ್ನಿ ಇದೀಗ ತಂಡಗಳ ಸಂಕ್ಯೆ 8ಕ್ಕೇರಿದೆ. ಮರಾಥಾ ಅರೇಬಿಯನ್ಸ್ ತಂಡದಲ್ಲಿ ಭಾರತ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ ಸೇರಿದಂತೆ 9 ದೇಶದ ಆಟಗಾರರಿದ್ದಾರೆ.
ಇಂದಿನಿಂದ(ನ.21) ಆರಂಭಗೊಳ್ಳುತ್ತಿರುವ ಈ ಟೂರ್ನಿಯಲ್ಲಿ ಭಾರತದ ವಿರೇಂದ್ರ ಸೆಹ್ವಾಗ್, ಜಹೀರ್ ಖಾನ್, ಆರ್‌ಪಿ ಸಿಂಗ್, ಪಾಕಿಸ್ತಾನದ ಶಾಹಿದ್ ಅಫ್ರೀದಿ ಸೇರಿದಂತೆ ಹಲವು ಸ್ಟಾರ್ ಮಾಜಿ ಕ್ರಿಕೆಟಿಗರು ಭಾಗವಹಿಸುತ್ತಿದ್ದಾರೆ. ಒಟ್ಟು 29 ಪಂದ್ಯಗಳಿರುವ ಈ ಟೂರ್ನಿ ನವೆಂಬರ್ 21 ರಿಂದ ಡಿಸೆಂಬರ್ 3 ರ ವರೆಗೆ ನಡೆಯಲಿದೆ. ಶಾರ್ಜಾ
