ವಿಜಯವಾಡ(ಫೆ.23): ಆಂಧ್ರ ಪ್ರದೇಶ ತಂಡ ಟಿ20 ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದಿದೆ. 

ಮುಷ್ತಾಕ್‌ ಅಲಿ ಟ್ರೋಫಿ: ಕರ್ನಾಟಕಕ್ಕೆ 9 ವಿಕೆಟ್‌ ಗೆಲುವು

ನಾಗಾಲ್ಯಾಂಡ್‌ ವಿರುದ್ಧ ಶುಕ್ರವಾರ ನಡೆದ ಮುಷ್ತಾಕ್‌ ಅಲಿ ಟಿ20 ಟೂರ್ನಿಯ ಪಂದ್ಯದಲ್ಲಿ 179 ರನ್‌ಗಳ ಗೆಲುವು ಸಾಧಿಸುವ ಮೂಲಕ, ಟಿ20 ಇತಿಹಾಸದಲ್ಲೇ ಅತಿದೊಡ್ಡ ಗೆಲುವಿನ ದಾಖಲೆ ನಿರ್ಮಿಸಿತು. 

2007ರ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಕೀನ್ಯಾ ವಿರುದ್ಧ 172 ರನ್‌ ಗೆಲುವು ಸಾಧಿಸಿ ಲಂಕಾ ದಾಖಲೆ ಬರೆದಿತ್ತು. ಆ ದಾಖಲೆಯನ್ನು ಆಂಧ್ರ ಪುಡಿಗಟ್ಟಿದೆ. ಮೊದಲು ಬ್ಯಾಟ್‌ ಮಾಡಿದ ಆಂಧ್ರ 244 ರನ್‌ ಸಿಡಿಸಿತು. ನಾಗಾಲ್ಯಾಂಡ್‌ 65 ರನ್‌ಗೆ ಆಲೌಟ್‌ ಆಯಿತು.