ಸಿಡ್ನಿ[ಜ.04]: ರಿಷಭ್ ಪಂತ್ ಅಜೇಯ ಶತಕ ಹಾಗೂ ರವೀಂದ್ರ ಜಡೇಜಾ ಅಬ್ಬರದ ಅರ್ಧಶತಕದ ನೆರವಿನಿಂದ ಟೀಂ ಇಂಡಿಯಾ 7 ವಿಕೆಟ್ ನಷ್ಟಕ್ಕೆ 622 ರನ್ ಬಾರಿಸಿ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ.

ಮೊದಲ ದಿನ ಚೇತೇಶ್ವರ್ ಪೂಜಾರ ಹಾಗೂ ಮಯಾಂಕ್ ಅಗರ್’ವಾಲ್ ಅಬ್ಬರಿಸಿದರೆ ಎರಡನೇ ದಿನ ವಿಕೆಟ್’ಕೀಪರ್ ಬ್ಯಾಟ್ಸ್’ಮನ್ ರಿಷಭ್ ಪಂತ್ ಹಾಗೂ ರವೀಂದ್ರ ಜಡೇಜಾ ಮಿಂಚಿದರು. ಏಳನೇ ವಿಕೆಟ್’ಗೆ ಈ ಜೋಡಿ 204 ರನ್’ಗಳ ಜತೆಯಾಟವಾಡುವ ಮೂಲಕ ಟೀಂ ಇಂಡಿಯಾ ಬೃಹತ್ ಮೊತ್ತ ಕಲೆ ಹಾಕಲು ನೆರವಾಯಿತು.

ಆಸ್ಟ್ರೇಲಿಯಾ ನೆಲದಲ್ಲಿ ಶತಕ ಸಿಡಿಸಿದ ಭಾರತ ಮೊದಲ ವಿಕೆಟ್’ಕೀಪರ್ ಎನ್ನುವ ಕೀರ್ತಿಗೆ ಪಂತ್ ಪಾತ್ರರಾಗಿದ್ದಾರೆ. ಅಲ್ಲದೇ ಏಷ್ಯಾಖಂಡದ ಆಟಗಾರ ಉಪಖಂಡದಾಚೆ ಗರಿಷ್ಠ ರನ್ ಬಾರಿಸಿದ ವಿಕೆಟ್ ಕೀಪರ್ ಖ್ಯಾತಿಗೆ ಪಂತ್ ಹಾಗೂ ಬಾಂಗ್ಲಾದೇಶದ ಮುಷ್ಫಿಕರ್ ರಹೀಮ್[159] ಪಾತ್ರರಾಗಿದ್ದಾರೆ.