ಟೀಂ ಇಂಡಿಯಾಗೆ ಆಘಾತ: 4 ರನ್’ಗಳಾಗುವಷ್ಟರಲ್ಲೇ 3 ವಿಕೆಟ್ ಪತನ..!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 12, Jan 2019, 12:52 PM IST
Sydney ODI Australia Pacers Rattle India Early In Chase Of 289
Highlights

ಏಕದಿನ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ ಜೇಸನ್ ಬೆರ್ಹೆನ್’ಡೋರ್ಫ್ ಮೊದಲ ಓವರ್’ನಲ್ಲಿ ಶಿಖರ್ ಧವನ್ ಅವರನ್ನು ಬಲಿ ಪಡೆಯುವ ಮೂಲಕ ಆಸಿಸ್’ಗೆ ಮೊದಲ ಯಶಸ್ಸು ತಂದಿತ್ತರು.

ಸಿಡ್ನಿ[ಜ.12]: ಆಸಿಸ್ ನೀಡಿರುವ ಸವಾಲಿನ ಗುರಿ ಬೆನ್ನತ್ತಿರುವ ಭಾರತ ಆರಂಭದಲ್ಲೇ ಮುಗ್ಗರಿಸಿದ್ದು, ಕೇವಲ ನಾಲ್ಕು ರನ್’ಗಳಾಗುವಷ್ಟರಲ್ಲೇ ಪ್ರಮುಖ ಮೂರು ವಿಕೆಟ್’ಗಳು ಪತನವಾಗಿವೆ. 

ಏಕದಿನ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ ಜೇಸನ್ ಬೆರ್ಹೆನ್’ಡೋರ್ಫ್ ಮೊದಲ ಓವರ್’ನಲ್ಲಿ ಶಿಖರ್ ಧವನ್ ಅವರನ್ನು ಬಲಿ ಪಡೆಯುವ ಮೂಲಕ ಆಸಿಸ್’ಗೆ ಮೊದಲ ಯಶಸ್ಸು ತಂದಿತ್ತರು. ಧವನ್ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು. ಇದಾದ ಕೆಲಹೊತ್ತಿನಲ್ಲೇ ಜೆ ರಿಚರ್ಡ್’ಸನ್ ಒಂದೇ ಓವರ್’ನಲ್ಲಿ ವಿರಾಟ್ ಕೊಹ್ಲಿ[3] ಹಾಗೂ ಅಂಬಟಿ ರಾಯುಡು ಬಲಿಪಡೆಯುವ ಮೂಲಕ ಭಾರತದ ಪಾಳಯದಲ್ಲಿ ಆತಂಕ ಸೃಷ್ಟಿಸಿದ್ದಾರೆ. ಇದೀಗ ಧೋನಿ-ರೋಹಿತ್ ಶರ್ಮಾ ಇನ್ನಿಂಗ್ಸ್ ಮುಂದುವರೆಸಿದ್ದಾರೆ.

ಇದಕ್ಕೂ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ  ಪೀಟರ್ ಹ್ಯಾಂಡ್ಸ್’ಕಂಬ್, ಉಸ್ಮಾನ್ ಖ್ವಾಜಾ ಹಾಗೂ ಶಾನ್ ಮಾರ್ಷ್ ಅವರ ಆಕರ್ಷಕ ಅರ್ಧಶತಕಗಳ ನೆರವಿನಿಂದ 288 ರನ್ ಬಾರಿಸಿದೆ. 
 

loader