ಹಾಕಿ ವಿಶ್ವಕಪ್‌ಗೆ ರಾಜ್ಯದ ಸುನಿಲ್ ಅನುಮಾನ
ನ.28 ರಿಂದ ಆರಂಭವಾಗಲಿರುವ ಹಾಕಿ ವಿಶ್ವಕಪ್ ಟೂರ್ನಿಗೆ ಸುನಿಲ್ ಲಭ್ಯವಾಗುವುದು ಅನುಮಾನವಾಗಿದೆ. ಹಾಕಿ ವಿಶ್ವಕಪ್ ಟೂರ್ನಿಗೆ ಭಾರೀ ಸಿದ್ಧತೆ ನಡೆಸಿರುವ ಭಾರತಕ್ಕೆ ಸುನಿಲ್ ಅಲಭ್ಯತೆ ಹಿನ್ನಡೆಯಾಗಿದೆ. ಇಲ್ಲಿ ಆಯೋಜಿಸಲಾಗಿರುವ ರಾಷ್ಟ್ರೀಯ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದ ಸ್ಟ್ರೈಕರ್ ಸುನಿಲ್, ಅಭ್ಯಾಸದ ವೇಳೆ ಮೊಣಕಾಲು ಗಾಯಕ್ಕೆ ತುತ್ತಾಗಿದ್ದಾರೆ ಎನ್ನಲಾಗಿದೆ.
ಭುವನೇಶ್ವರ್[ಅ.11]: ಇಲ್ಲಿನ ಕಳಿಂಗ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಶಿಬಿರದಲ್ಲಿ ಅಭ್ಯಾಸ ನಡೆಸುವ ವೇಳೆ ಕಾಲಿನ ಮಂಡಿ ನೋವಿಗೆ ತುತ್ತಾದ ಕರ್ನಾಟಕದ ಹಾಕಿ ಆಟಗಾರ ಎಸ್.ವಿ.ಸುನಿಲ್, ಭಾರತ ತಂಡದಿಂದ ಹೊರ ಬೀಳುವ ಸಾಧ್ಯತೆಯಿದೆ.
ನ.28 ರಿಂದ ಆರಂಭವಾಗಲಿರುವ ಹಾಕಿ ವಿಶ್ವಕಪ್ ಟೂರ್ನಿಗೆ ಸುನಿಲ್ ಲಭ್ಯವಾಗುವುದು ಅನುಮಾನವಾಗಿದೆ. ಹಾಕಿ ವಿಶ್ವಕಪ್ ಟೂರ್ನಿಗೆ ಭಾರೀ ಸಿದ್ಧತೆ ನಡೆಸಿರುವ ಭಾರತಕ್ಕೆ ಸುನಿಲ್ ಅಲಭ್ಯತೆ ಹಿನ್ನಡೆಯಾಗಿದೆ. ಇಲ್ಲಿ ಆಯೋಜಿಸಲಾಗಿರುವ ರಾಷ್ಟ್ರೀಯ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದ ಸ್ಟ್ರೈಕರ್ ಸುನಿಲ್, ಅಭ್ಯಾಸದ ವೇಳೆ ಮೊಣಕಾಲು ಗಾಯಕ್ಕೆ ತುತ್ತಾಗಿದ್ದಾರೆ ಎನ್ನಲಾಗಿದೆ.
‘ತರಬೇತಿ ವೇಳೆ ಜಾರಿಬಿದ್ದಿದ್ದರಿಂದ ಮಂಡಿಗೆ ಗಾಯವಾಗಿದೆ. ಚಿಕಿತ್ಸೆಗಾಗಿ ಗುರುವಾರ ದೆಹಲಿಗೆ ತೆರಳುತ್ತಿದ್ದೇನೆ. ಶೀಘ್ರ ಗುಣಮುಖರಾಗುವ ವಿಶ್ವಾಸವಿದೆ’ ಎಂದು ಸುನಿಲ್ ‘ಕನ್ನಡಪ್ರಭ’ ಕ್ಕೆ ತಿಳಿಸಿದ್ದಾರೆ. ಸುನಿಲ್ ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗಿರುವ ರಾಜ್ಯದ ಏಕೈಕ ಆಟಗಾರರಾಗಿದ್ದಾರೆ.
ಅ.18ರಿಂದ ಓಮನ್‌ನ ಮಸ್ಕಟ್‌ನಲ್ಲಿ ಆರಂಭವಾಗಲಿರುವ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಿಂದ ಸುನಿಲ್’ಗೆ ವಿಶ್ರಾಂತಿ ನೀಡಲಾಗಿತ್ತು. ‘ಹೊಸದಾಗಿ ಅಳವಡಿಸಲಾಗಿದ್ದ ಟರ್ಫ್‌ನಲ್ಲಿ ರಿವರ್ಸ್ ಹಿಟ್ ಮಾಡಬೇಕಾದರೆ, ಜಾರಿ ಬಿದಿದ್ದರಿಂದ ಮೊಣಕಾಲಿಗೆ ಪೆಟ್ಟಾಗಿದೆ. ಆದರೆ ವಿಶ್ವಕಪ್ ಆರಂಭವಾಗುವುದಕ್ಕೂ ಮೊದಲು ಚೇತರಿಸಿಕೊಳ್ಳುವುದಕ್ಕೆ ಕಷ್ಟ ಸಾಧ್ಯವಾಗಿದೆ. ಹಾಗಾಗಿ ವಿಶ್ವಕಪ್‌ಗೆ ಲಭ್ಯವಾಗುವುದು ಖಚಿತವಾಗಿಲ್ಲ’ ಎಂದು ಮೂಲಗಳು ತಿಳಿಸಿವೆ. ಸುನಿಲ್, ಈವರೆಗೂ 200 ಅಂತರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ.