ಸುರೇಶ್ ರೈನಾ 223 ಏಕದಿನ ಹಾಗೂ 65 ಟಿ20 ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ದಾರೆ.

ನವದೆಹಲಿ(ಫೆ.16): ಉತ್ತಮ ಪ್ರದರ್ಶನ ತೋರಿದರೂ ಹಲವು ಬಾರಿ ನನ್ನನ್ನು ಕಡೆಗಣಿಸಲಾಯಿತು, ತಂಡಕ್ಕೆ ಆಯ್ಕೆ ಮಾಡಿಕೊಳ್ಳಲಿಲ್ಲ. ಇದರಿಂದಾಗಿ ನನಗೆ ಬಹಳ ನೋವಾಗಿದೆ ಎಂದು ಭಾರತೀಯ ಕ್ರಿಕೆಟಿಗ ಸುರೇಶ್ ರೈನಾ ಬೇಸರ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಫೆ.18ರಿಂದ ಆರಂಭಗೊಳ್ಳುವ ಟಿ20 ಸರಣಿಗೆ ರೈನಾ ಆಯ್ಕೆಯಾಗಿದ್ದು ವರ್ಷದ ಬಳಿಕ ಭಾರತ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಉತ್ತಮ ಪ್ರದರ್ಶನದ ಹೊರತಾಗಿಯೂ ತಂಡದಿಂದ ಕೈಬಿಟ್ಟದ್ದು ಬೇಸರ ಮೂಡಿಸಿತ್ತು. ಆದರೆ, ಇದೀಗ ಯೋ-ಯೋ ಪರೀಕ್ಷೆ ಪೂರ್ಣಗೊಳಿಸಿದ್ದು, ಬಲಿಷ್ಠಗೊಂಡಿದ್ದೇನೆ. 2019 ಏಕದಿನ ವಿಶ್ವಕಪ್‌'ನಲ್ಲಿ ಆಡುವುದು ನನ್ನ ಗುರಿ’ ಎಂದು ರೈನಾ ಹೇಳಿದ್ದಾರೆ.

View post on Instagram

ಸುರೇಶ್ ರೈನಾ 223 ಏಕದಿನ ಹಾಗೂ 65 ಟಿ20 ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ದಾರೆ.