2015ರ ಬಳಿಕ ಸುರೇಶ್ ರೈನಾ ಏಕದಿನ ತಂಡದಲ್ಲಿ ಟೀಂ ಇಂಡಿಯಾ ಪರ ಕಾಣಿಸಿಕೊಂಡಿಲ್ಲ.
ಬೆಂಗಳೂರು(ಆ.13): ಶ್ರೀಲಂಕಾ ವಿರುದ್ಧದ ಸೀಮಿತ ಓವರ್'ಗಳ ಸರಣಿಯಲ್ಲಿ ಭಾರತ ತಂಡ ಕೂಡಿಕೊಳ್ಳುವ ವಿಶ್ವಾಸವಿಸೆ ಎಂದು ಸುರೇಶ್ ರೈನಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶ್ರೀಲಂಕಾ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಗೆ ಬಿಸಿಸಿಐ ಇಂದು ಭಾರತ ತಂಡವನ್ನು ಆಯ್ಕೆ ಮಾಡಲಿದ್ದು, ತಂಡದಲ್ಲಿ ಸ್ಥಾನ ಪಡೆಯುವ ವಿಶ್ವಾಸವಿದೆ ಎಂದು ರೈನಾ ಹೇಳಿದ್ದಾರೆ.
ನಾನು ಆಡುವುದಿಲ್ಲ ಎಂದು ಹೇಲಿದ್ದು ಯಾರು?, ಆಡಲು ಸಿದ್ದವಿದ್ದೇನೆ' ಎಂದು ರೈನಾ ತಿಳಿಸಿದ್ದಾರೆ. 2015ರ ಬಳಿಕ ಸುರೇಶ್ ರೈನಾ ಏಕದಿನ ತಂಡದಲ್ಲಿ ಟೀಂ ಇಂಡಿಯಾ ಪರ ಕಾಣಿಸಿಕೊಂಡಿಲ್ಲ.
ಎರಡು ತಿಂಗಳು ಆ್ಯಮ್'ಸ್ಟರ್ ಡ್ಯಾಮ್'ನಲ್ಲಿ ತರಬೇತಿ ಪಡೆದು, ಸದ್ಯ ಬೆಂಗಳೂರಿನ ಎನ್'ಸಿಎನಲ್ಲಿ ಧೋನಿ ಅವರೊಂದಿಗೆ ರೈನಾ ಅಭ್ಯಾಸ ನಡೆಸುತ್ತಿದ್ದಾರೆ.
