ರಾಷ್ಟ್ರೀಯ ಕಬಡ್ಡಿ ಚಾಂಪಿಯನ್‌ಶಿಪ್‌: ಕರ್ನಾಟಕ ಶುಭಾರಂಭ

69ನೇ ರಾಷ್ಟ್ರೀಯ ಪುರುಷರ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಶುಭಾರಂಭ
ಬಿಎಸ್‌ಎನ್‌ಎಲ್‌ ವಿರುದ್ಧ 43-5 ಅಂಕಗಳ ಅಂತರದಲ್ಲಿ ಭರ್ಜರಿ ಗೆಲುವು
ನಾಕೌಟ್‌ ಹಂತಕ್ಕೇರುವ ನಿರೀಕ್ಷೆಯಲ್ಲಿರುವ ಕರ್ನಾಟಕ ಕಬಡ್ಡಿ ತಂಡ

69th Senior National Mens Kabaddi Championship Karnataka make winning Start kvn

ಚರ್ಖಿ ದಾದ್ರಿ(ಜು.23): 69ನೇ ರಾಷ್ಟ್ರೀಯ ಪುರುಷರ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ತಂಡ ಶುಭಾರಂಭ ಮಾಡಿದ್ದು, ನಾಕೌಟ್‌ ಹಂತಕ್ಕೇರುವ ನಿರೀಕ್ಷೆಯಲ್ಲಿದೆ. ‘ಎಫ್‌’ ಗುಂಪಿನಲ್ಲಿರುವ ಕರ್ನಾಟಕ, ಟೂರ್ನಿಯ 2ನೇ ದಿನವಾದ ಶುಕ್ರವಾರ ತನ್ನ ಮೊದಲ ಪಂದ್ಯದಲ್ಲಿ ಬಿಎಸ್‌ಎನ್‌ಎಲ್‌ ವಿರುದ್ಧ 43-5 ಅಂಕಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿತು.

ಗುಂಪು ಹಂತದ 2ನೇ ಪಂದ್ಯದಲ್ಲಿ ಪಶ್ಚಿಮ ಬಂಗಾಳ ವಿರುದ್ಧ 42-37ರ ರೋಚಕ ಗೆಲುವು ಸಾಧಿಸಿ ಅಜೇಯವಾಗಿ ಉಳಿಯಿತು. ಗುಂಪು ಹಂತದ ಅಂತಿಮ ಪಂದ್ಯದಲ್ಲಿ ಕರ್ನಾಟಕಕ್ಕೆ ಬಲಿಷ್ಠ ಹರಾರ‍ಯಣ ಎದುರಾಗಲಿದೆ. ಟೂರ್ನಿಯಲ್ಲಿ ಒಟ್ಟು 31 ತಂಡಗಳು ಟ್ರೋಫಿಗಾಗಿ ಸ್ಪರ್ಧಿಸುತ್ತಿವೆ. ಜು.24ರ ವರೆಗೂ ಪಂದ್ಯಾವಳಿ ನಡೆಯಲಿದೆ.

ಕಾಮನ್ವೆಲ್ತ್‌ನಲ್ಲಿ ತೇಜಸ್ವಿನ್‌ ಸ್ಪರ್ಧೆಗೆ ಕೊನೆಗೂ ಅನುಮತಿ

ನವದೆಹಲಿ: ಒಂದು ತಿಂಗಳ ಹೈಡ್ರಾಮಾ ಬಳಿಕ ಕೊನೆಗೂ ಭಾರತದ ಹೈಜಂಪ್‌ ಪಟು ತೇಜಸ್ವಿನ್‌ ಶಂಕರ್‌ಗೆ ಮುಂದಿನ ವಾರದಿಂದ ಆರಂಭಗೊಳ್ಳಲಿರುವ ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಸ್ಪರ್ಧಿಸಲು ಆಯೋಜಕರು ಅನುಮತಿ ನೀಡಿದ್ದಾರೆ. ಭಾರತೀಯ ಒಲಿಂಪಿಕ್ಸ್‌ ಸಂಸ್ಥೆ(ಐಒಎ) ಸಲ್ಲಿಸಿದ ಮನವಿಯನ್ನು ಕಾಮನ್‌ವೆಲ್ತ್‌ ಗೇಮ್ಸ್‌ ಫೆಡರೇಷನ್‌(ಸಿಜಿಎಫ್‌) ಪುರಸ್ಕರಿಸಿದೆ. ಈ ಮೊದಲು ಐಒಎ, ಭಾರತ ತಂಡದಲ್ಲಿ ತಡವಾಗಿ ಹೆಸರು ಸೇರಿಸಿದ್ದಕ್ಕೆ ತೇಜಸ್ವಿನ್‌ಗೆ ಅವಕಾಶ ನಿರಾಕರಿಸಲಾಗಿತ್ತು.

ತೈಪೆ ಓಪನ್‌: ಕಶ್ಯಪ್‌, ತನಿಶಾ ಕ್ರಾಸ್ಟೊ ಹೊರಕ್ಕೆ

ತೈಪೆ: ಭಾರತದ ಪಾರುಪಳ್ಳಿ ಕಶ್ಯಪ್‌, ತನಿಶಾ ಕ್ರಾಸ್ಟೊತೈಪೆ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಸೋತು ಹೊರಬಿದ್ದಿದ್ದಾರೆ. ಇದರೊಂದಿಗೆ ಭಾರತದ ಸವಾಲು ಮುಕ್ತಾಯಗೊಂಡಿದೆ. ಪುರುಷರ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಕಶ್ಯಪ್‌, ಮಲೇಷ್ಯಾದ ಸೊಂಗ್‌ ಜೊ ವೆನ್‌ ವಿರುದ್ಧ 12-21, 21-12, 17-21ರಲ್ಲಿ ಸೋತರೆ, ಮಹಿಳಾ ಮತ್ತು ಮಿಶ್ರ ಡಬಲ್ಸ್‌ನಲ್ಲಿ ತನಿಶಾ ಸೋತು ನಿರಾಸೆ ಅನುಭವಿಸಿದರು. ಮಹಿಳಾ ಡಬಲ್ಸ್‌ನಲ್ಲಿ ತನಿಶಾ-ಶೃತಿ ಮಿಶ್ರಾ ಹಾಂಕಾಂಗ್‌ ಜೋಡಿ ವಿರುದ್ಧ ಸೋತರೆ, ಮಿಶ್ರ ಡಬಲ್ಸ್‌ನಲ್ಲಿ ತನಿಶಾ ಮತ್ತು ಇಶಾನ್‌ ಭಟ್ನಾಗರ್‌ ಮಲೇಷ್ಯಾ ಜೋಡಿ ವಿರುದ್ಧ ಪರಾಭವಗೊಂಡರು.

PKL Auction 2022: ಪ್ರೊ ಕಬಡ್ಡಿ ಲೀಗ್‌ ಹರಾಜಿಗೆ ಡೇಟ್‌ ಫಿಕ್ಸ್‌, ಇಲ್ಲಿದೆ ಹರಾಜಿನ ಕಂಪ್ಲೀಟ್ ಡೀಟೈಲ್ಸ್

ಬಿಸಿಸಿಐ ಅಂಪೈರ್: ಎ+ ದರ್ಜೆ ಹೊಸದಾಗಿ ಸೇರ್ಪಡೆ

ನವದೆಹಲಿ: ದೇಸಿ ಅಂಪೈರ್‌ಗಳಿಗೆ 'ಎ+' ದರ್ಜೆಯನ್ನು ಬಿಸಿಸಿಐ ಪರಿಚಯಿಸಿದ್ದು, ಈ ದರ್ಜೆಯಲ್ಲಿ 10 ಅಂಪೈರ್‌ಗಳನ್ನು ಸೇರ್ಪಡೆಗೊಳಿಸಿದೆ. .ಈ ಪಟ್ಟಿಯಲ್ಲಿ ಐವರು ಅಂತರರಾಷ್ಟ್ರೀಯ ಅಂಪೈರ್‌ಗಳಾದ ನಿತಿನ್ ಮೆನನ್, ಅನಿಲ್ ಚೌಧರಿ, ಮದನ್ ಗೋಪಾಲ್, ಕೆ ಎನ್‌ ಪದ್ಮನಾಭನ್, ವೀರೇಂದ್ರ ಶರ್ಮಾ ಸ್ಥಾನ ಪಡೆದ ಪ್ರಮುಖರೆನಿಸಿಕೊಂಡಿದ್ದಾರೆ. 'ಎ+', 'ಎ' ದರ್ಜೆಯಲ್ಲಿರುವ ಅಂಪೈರ್‌ಗಳಿಗೆ ಪ್ರತಿ ದೇಸಿ ಪಂದ್ಯದ ಕಾರ್ಯನಿರ್ವಹಣೆಗೆ 40,000 ರುಪಾಯಿ ವೇತನ ಸಿಗಲಿದ್ದು, 'ಬಿ' ಹಾಗೂ 'ಸಿ' ದರ್ಜೆಗೆ 30,000 ರುಪಾಯಿ ಸಿಗಲಿದೆ.

Latest Videos
Follow Us:
Download App:
  • android
  • ios