ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ವಯಸ್ಸಿನ ತಪ್ಪು ಮಾಹಿತಿ ಪ್ರಕರಣದಲ್ಲಿ ಹೈಕೋರ್ಟ್ ತನಿಖೆಗೆ ಆದೇಶಿಸಿತ್ತು, ಆದರೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. 

ಬೆಂಗಳೂರು: ವಯಸ್ಸಿನ ಬಗ್ಗೆ ತಪ್ಪು ಮಾಹಿತಿ ನೀಡಿದ ಆರೋಪ ಸಂಬಂಧ ಬ್ಯಾಡ್ಮಿಂಟನ್ ಪಟು ಲಕ್ಷ್ಯ ಸೇನ್ ಮತ್ತವರ ಕುಟುಂಬ ಸದಸ್ಯರು ಹಾಗೂ ತರಬೇತುದಾರ ವಿಮಲ್ ಕುಮಾರ್ ವಿರುದ್ಧ ದಾಖಲಾಗಿರುವ ಎಫ್ ಐಆರ್ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದ್ದು, ತನಿಖೆಗೆ ಆದೇಶಿಸಿದೆ. ಆದರೆ ಇದಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ತಡೆ ಸಿಕ್ಕಿದೆ. 

ಬ್ಯಾಡ್ಮಿಂಟನ್ ಆಡಿ ಸರ್ಕಾರಿ ಸೌಲಭ್ಯ ಪಡೆಯಲು ತಮ್ಮ ವಯಸ್ಸನ್ನು 2.5 ವರ್ಷ ಕಡಿಮೆ ತೋರಿಸಲು ವಯಸ್ಸಿನ ಪ್ರಮಾಣ ಪತ್ರವನ್ನು ನಕಲಿ ಮಾಡಿ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್‌ಗೆ ತಪ್ಪು ಆದೇಶಿಸಿದ್ದ ರಾಜ್ಯ ಹೈಕೋರ್ಟ್‌‌ ಮಾಹಿತಿ ನೀಡಿದ ಆರೋಪ ಲಕ್ಷ ಸೇನ್ ವಿರುದ್ಧವಿದೆ. ಹೀಗಾಗಿ ತಮ್ಮ ವಿರುದ್ಧದ ಎಫ್‌ಐಆರ್ ಹಾಗೂ ನಗರದ 8ನೇ ಎಸಿಎಂಎಂ ಕೋರ್ಟ್‌ ವಿಚಾರಣೆ ರದ್ದುಪಡಿಸುವಂತೆ ಕೋರಿ ಲಕ್ಷ, ಸೇನ್, ಕುಟುಂಬಸ್ಥರು, ವಿಮಲ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಂ.ಜಿ.ಉಮಾ ಫೆ.19ರಂದು ತನಿಖೆಗೆ ಆದೇಶಿಸಿತ್ತು. 

ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸೇನ್ ಮತ್ತಿತರರು ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾ.ಸುಧಾಂಶು ಧುಲಿಯಾ, ವಿನೋದ್ ಚಂದ್ರನ್ ಅವರಿದ್ದ ಪೀಠವು ತನಿಖೆಗೆ ತಡೆ ನೀಡಿದೆ. ಮುಂದಿನ ವಿಚಾರಣೆ ಏ.16ಕ್ಕೆ ನಡೆಯಲಿದೆ.

ಇದನ್ನೂ ಓದಿ: ರಣಜಿ ಟ್ರೋಫಿ ಫೈನಲ್: ವಿದರ್ಭ ಎದುರು ಟಾಸ್ ಗೆದ್ದ ಕೇರಳ ಬೌಲಿಂಗ್ ಆಯ್ಕೆ!

ಭಾರತ ಬಾಕ್ಸಿಂಗ್ ಸಂಸ್ಥೆ ಮೇಲ್ವಿಚಾರಣೆಗೆ ಸ್ವತಂತ್ರ ಸಮಿತಿ ರಚಿಸಿದ ಐಒಎ!

ನವದೆಹಲಿ: ರಾಷ್ಟ್ರೀಯ ಫೆಡರೇಶನ್ ಸಮಯಕ್ಕೆ ಸರಿಯಾಗಿ ಚುನಾವಣೆ ನಡೆಸಲು ವಿಫಲವಾದ ಬೆನ್ನಲ್ಲೇ ದೇಶದಲ್ಲಿ ಬಾಕ್ಸಿಂಗ್ ಸಂಸ್ಥೆಯ ವ್ಯವಹಾರಗಳ ಮೇಲ್ವಿಚಾರಣೆಗಾಗಿ ಭಾರತೀಯ ಒಲಿಂಪಿಕ್‌ ಸಂಸ್ಥೆ(ಐಒಎ) ಸೋಮವಾರ ಐದು ಸದಸ್ಯರ ಸ್ವತಂತ್ರ ಸಮಿತಿಯೊಂದನ್ನು ರಚಿಸಿದೆ. ಭಾರತೀಯ ಅಥ್ಲೆಟಿಕ್ಸ್‌ ಫೆಡರೇಶನ್(ಎಎಫ್‌ಐ) ಮಾಜಿ ಖಜಾಂಚಿ ಮಧುಕಾಂತ್‌ ಪಾಠಕ್ ನೇತೃತ್ವದ ತಾತ್ಕಾಲಿಕ ಸಮಿತಿ ರಚನೆಯಾಗಿದೆ. 

ಈ ಬಗ್ಗೆ ಒಲಿಂಪಿಕ್ಸ್ ಸಂಸ್ಥೆ ಆದೇಶ ಹೊರಡಿಸಿದ್ದು, ‘ಬಿಎಫ್‌ಐಗೆ ಫೆ.2ರೊಳಗೆ ಚುನಾವಣೆ ನಡೆಯಬೇಕಿತ್ತು. ಆದರೆ ಚುನಾವಣೆ ನಡೆಸಿಲ್ಲ. ಇದರಿಂದ ಆಡಳಿತಾತ್ಮಕ ಅಸ್ಥಿರತೆ ಉಂಟಾಗಿದೆ. ಈ ಅಂಶ ಗಮನದಲ್ಲಿಟ್ಟುಕೊಂಡು ಬಾಕ್ಸಿಂಗ್ ಫೆಡರೇಶನ್ ವ್ಯವಹಾರಗಳ ಮೇಲ್ವಿಚಾರಣೆಗೆ, ನ್ಯಾಯಯುತ ಚುನಾವಣೆ ನಡೆಯುವವರೆಗೂ ಅದರ ಚಟುವಟಿಕೆಗಳನ್ನು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಲು ತಾತ್ಕಾಲಿಕ ಸಮಿತಿ ರಚಿಸಲಾಗಿದೆ’ ಎಂದಿದೆ.

ಇದನ್ನೂ ಓದಿ: ಭಾರತ ಎದುರು ಪಾಕ್ ಆಟಗಾರರ 'ಹುಮ್ಮಸ್ಸು' ಪ್ರಶ್ನಿಸಿದ ಜಾವೇದ್ ಮಿಯಾಂದಾದ್!

ಬೆಂಗ್ಳೂರು ಓಪನ್ ಟೆನಿಸ್‌: ರಾಮನಾಥನ್, ಮಾನಸ್ ಮೊದಲ ಸುತ್ತಲ್ಲೇ ಔಟ್

ಬೆಂಗಳೂರು: ಬೆಂಗಳೂರು ಓಪನ್ ಟೆನಿಸ್ ಟೂರ್ನಿ ಯಲ್ಲಿ ಭಾರತ ಮತ್ತೆ ನೀರಸ ಪ್ರದರ್ಶನ ನೀಡಿದೆ. ಮಂಗಳವಾರ ನಡೆದ ಸಿಂಗಲ್ಸ್ ಮೊದಲ ಸುತ್ತಿನಲ್ಲಿ ಭಾರತದ ಅಗ್ರ ಟೆನಿಸಿಗ, ಟೂರ್ನಿಗೆ ವೈಲ್ಡ್ ಕಾರ್ಡ್ ಮೂಲಕ ಪ್ರವೇಶ ಪಡೆದಿದ್ದ ರಾಮನಾಥನ್ ಅವರು
ಜಪಾನ್‌ನ ಶಿಂಟಾರೊ ಮೊಚಿಜುಕಿ ವಿರುದ್ಧ 6-7(3), 5-7 ನೇರ ಸೆಟ್‌ಗಳಲ್ಲಿ ಸೋಲನುಭವಿಸಿದೆ. 

ವೈಲ್ಡ್ ಕಾರ್ಡ್ ಮೂಲಕ ಟೂರ್ನಿಗೇರಿದ್ದ ಮತ್ತೋರ್ವ ಟೆನಿಸಿಗ, 17 ವರ್ಷದ ಮಾನಸ್ ಧಾಮ್ಮೆ ಕೂಡಾ ಸೋಲುಂಡರು. ಅವರು ಪೀಟರ್ ಬಾರ್ ವಿರುದ್ಧ 3-6, 6-3, 6-7 (3) ಸೆಟ್‌ಗಳಲ್ಲಿ ಪರಾಭವಗೊಂಡರು. ಇನ್ನು, ಕರಣ್ ಸಿಂಗ್ ಆಸ್ಟಿಯಾದ ಜುರಿಜ್ ವಿರುದ್ಧ ಸೋತರು. ಇದರೊಂದಿಗೆ ಸಿಂಗಲ್ಸ್‌ನಲ್ಲಿ ಭಾರತದ ಅಭಿಯಾನ ಕೊನೆಗೊಂಡಿತು.