ನವ​ದೆ​ಹ​ಲಿ(ಅ.04): ಇಂಡಿ​ಯನ್‌ ಪ್ರೀಮಿ​ಯರ್‌ ಲೀಗ್‌ (ಐ​ಪಿ​ಎ​ಲ್‌)ನಲ್ಲಿ ಬೆಟ್ಟಿಂಗ್‌ ನಡೆಸಿದ ತಪ್ಪಿಗಾಗಿ ಚೆನ್ನೈ ಸೂಪರ್‌ ಕಿಂಗ್ಸ್‌ (ಸಿ​ಎ​ಸ್‌​ಕೆ) ತಂಡ​ವನ್ನು ಎರಡು ವರ್ಷ​ಗಳ ಕಾಲ ಐಪಿ​ಎ​ಲ್‌​ನಿಂದ ನಿಷೇ​ಧಿಸಿರುವು​ದರ ವಿರುದ್ಧ ಬಿಜೆಪಿ ನಾಯಕ ಸುಬ್ರ​ಮಣ್ಯಂ ಸ್ವಾಮಿ ಸಲ್ಲಿ​ಸಿದ್ದ ಅರ್ಜಿಯ ವಿಚಾ​ರಣೆಯ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯ ಕಾಯ್ದಿಟ್ಟಿದೆ.

2013ರ ಐಪಿ​ಎಲ್‌ ಆವೃ​ತ್ತಿ​ಯಲ್ಲಿ ನಡೆ​ದಿದ್ದ ಫಿಕ್ಸಿಂಗ್‌ ಪ್ರಕ​ರ​ಣದ ತನಿಖೆ ನಡೆ​ಸಿದ್ದ ಲೋಧಾ ಸಮಿ​ತಿಯು ಸಿಎ​ಸ್‌ಕೆ ತಂಡ​ವನ್ನು 2 ವರ್ಷ​ಗಳ ಕಾಲ ನಿಷೇ​ಧಿ​ಸಿತ್ತು.

ತಂಡದ ಮಾಲೀಕ ಎನ್‌. ಶ್ರೀನಿ​ವಾ​ಸನ್‌ ಇಲ್ಲವೇ ಆಟಗಾರರ ಮೇಲೆ ಯಾವುದೇ ಆರೋ​ಪ​ಗ​ಳಿ​ಲ್ಲ​ದಿ​ದ್ದರೂ ಸಿಎ​ಸ್‌ಕೆಯನ್ನು ನಿಷೇಧಿಸಿದ್ದೇಕೆ ಎಂದು ಸುಬ್ರಹ್ಮಣಿಯನ್‌ ಸ್ವಾಮಿ ನ್ಯಾಯಾಲಯದಲ್ಲಿ ಪ್ರಶ್ನಿ​ಸಿ​ದ್ದಾರೆ.

ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ರಾಜಸ್ಥಾನ ರಾಯಲ್ಸ್ ತಂಡದ ಪಾಲುದಾರರಾಗಿದ್ದ ಗುರುನಾಥ್ ಮೇಯಪ್ಪನ್, ರಾಜ್ ಕುಂದ್ರಾ ಬೆಟ್ಟಿಂಗ್'ನಲ್ಲಿ ತೊಡಗಿದ್ದು ಪತ್ತೆಯಾದ ಹಿನ್ನೆಲೆಯಲ್ಲಿ ಲೋಧ ಕಮಿಟಿ ಈ ಎರಡು ತಂಡವನ್ನು ನಿಷೇಧಿಸಿತ್ತು.