ಜೈಪುರ[ಮೇ.11]: ಚೊಚ್ಚಲ ಮಹಿಳಾ ಟಿ20 ಚಾಲೆಂಜರ್‌ (ಮಹಿಳಾ ಐಪಿಎಲ್‌) ಫೈನಲ್‌ ಪಂದ್ಯದಲ್ಲಿ ಟಾಸ್ ಗೆದ್ದ ಸೂಪರ್’ನೋವಾಸ್ ತಂಡದ ತಂಡದ ನಾಯಕಿ ಮಿಥಾಲಿ ರಾಜ್ ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ. 

ಇಲ್ಲಿನ ಸವಾಯಿ ಮಾನ್’ಸಿಂಗ್ ಮೈದಾನದಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯಕ್ಕೆ ಉಭಯ ತಂಡಗಳು ಸಜ್ಜಾಗಿದ್ದು, ಚೊಚ್ಚಲ ಕಪ್ ಎತ್ತಿ ಹಿಡಿಯುವ ಕನವರಿಕೆಯಲ್ಲಿವೆ. ವೆಲಾಸಿಟಿ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಕೋಮಲ್ ಜಂಜಾದ್ ಬದಲಿಗೆ ದೇವಿಕಾ ವೈದ್ಯ ತಂಡ ಕೂಡಿಕೊಂಡಿದ್ದಾರೆ. ಇನ್ನು ಸೂಪರ್’ನೋವಾಸ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. 

ಕಳೆದ ಪಂದ್ಯದಲ್ಲಿ ವೆಲಾಸಿಟಿ ತಂಡವು ಸೂಪರ್’ನೋವಾಸ್ ವಿರುದ್ಧ ಮುಗ್ಗರಿಸಿತ್ತು. ಇದೀಗ ಮಿಥಾಲಿ ಪಡೆ ಹರ್ಮನ್’ಪ್ರೀತ್ ಕೌರ್ ತಂಡವನ್ನು ಮಣಿಸುವ ಕನವರಿಕೆಯಲ್ಲಿದೆ.

ತಂಡಗಳು ಹೀಗಿವೆ: