ಡೆಲ್ಲಿ ಮಣಿಸಿ ಅಗ್ರಸ್ಥಾನಕ್ಕೇರಿದ ಸನ್’ರೈಸರ್ಸ್

Sunrisers Hyderabad Win by 7 Wickets
Highlights

ಈ ಗೆಲುವಿನೊಂದಿಗೆ ಹೈದರಾಬಾದ್ ಅಂಕಪಟ್ಟಿಯಲ್ಲಿ ಮತ್ತೊಮ್ಮೆ ಅಗ್ರಸ್ಥಾನಕ್ಕೇರಿದರೆ, ಡೆಲ್ಲಿ 7 ಸೋಲಿನೊಂದಿಗೆ 7ನೇ ಸ್ಥಾನದಲ್ಲೇ ಉಳಿದಿದ್ದು ಬಹುತೇಕ ಟೂರ್ನಿಯಿಂದ ಹೊರಬಿದ್ದಂತೆ ಆಗಿದೆ.

ಹೈದರಾಬಾದ್[ಮೇ.05]: ರೋಚಕತೆಯಿಂದ ಕೂಡಿದ್ದ ಸನ್’ರೈಸರ್ಸ್ ಹೈದರಾಬಾದ್ ಹಾಗೂ ಡೆಲ್ಲಿ ಡೇರ್’ಡೆವಿಲ್ಸ್ ನಡುವಿನ ಪಂದ್ಯದಲ್ಲಿ ಸನ್’ರೈಸರ್ಸ್ 7 ವಿಕೆಟ್’ಗಳ ರೋಚಕ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಹೈದರಾಬಾದ್ ಅಂಕಪಟ್ಟಿಯಲ್ಲಿ ಮತ್ತೊಮ್ಮೆ ಅಗ್ರಸ್ಥಾನಕ್ಕೇರಿದರೆ, ಡೆಲ್ಲಿ 7 ಸೋಲಿನೊಂದಿಗೆ 7ನೇ ಸ್ಥಾನದಲ್ಲೇ ಉಳಿದಿದ್ದು ಬಹುತೇಕ ಟೂರ್ನಿಯಿಂದ ಹೊರಬಿದ್ದಂತೆ ಆಗಿದೆ.
ಡೆಲ್ಲಿ ನೀಡಿದ್ದ 163 ರನ್’ಗಳ ಸವಾಲಿನ ಗುರಿ ಬೆನ್ನತ್ತಿದ ಹೈದರಾಬಾದ್ ಉತ್ತಮ ಆರಂಭವನ್ನೇ ಪಡೆಯಿತು. ಅಲೆಕ್ಸ್ ಹೇಲ್ಸ್ 9 ರನ್’ಗಳಿದ್ದಾಗ ಮ್ಯಾಕ್ಸ್’ವೆಲ್ ಕ್ಯಾಚ್ ಕೈಚೆಲ್ಲಿದ್ದರು. ಸಿಕ್ಕ ಜೀವದಾನದ ಲಾಭ ಪಡೆದ ಹೇಲ್ಸ್ ಡೆಲ್ಲಿ ಬೌಲರ್’ಗಳನ್ನು ಮನಬಂದಂತೆ ದಂಡಿಸಿದರು. ಹೇಲ್ಸ್’ಗೆ ಧವನ್ ಉತ್ತಮ ಸಾಥ್ ನೀಡಿದರು. ಮೊದಲ ವಿಕೆಟ್’ಗೆ ಹೇಲ್ಸ್-ಧವನ್ ಜೋಡಿ 76 ರನ್’ಗಳ ಜತೆಯಾಟವಾಡಿತು. ಹೇಲ್ಸ್ 45 ಹಾಗೂ ಧವನ್ 33 ರನ್ ಸಿಡಿಸಿ ಅಮಿತ್ ಮಿಶ್ರಾ ಎಸೆತದಲ್ಲಿ ಈ ಇಬ್ಬರು ಕ್ಲೀನ್ ಬೌಲ್ಡ್ ಆದರು. ಆ ಬಳಿಕ ಮನೀಶ್ ಪಾಂಡೆ[21] ನಾಯಕ ಕೇನ್ ವಿಲಿಯಮ್ಸನ್[32*] ಹಾಗೂ ಯೂಸೂಪ್ ಪಠಾಣ್[27*] ಅಜೇಯ ಜತೆಯಾಟವಾಡುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.
ಇದಕ್ಕೂ ಮೊದಲು ಡೆಲ್ಲಿ ಪೃಥ್ವಿ ಶಾ[65] ಹಾಗೂ ಶ್ರೇಯಸ್ ಅಯ್ಯರ್[44] ಉಪಯುಕ್ತ ಬ್ಯಾಟಿಂಗ್ ನೆರವಿನಿಂದ 163 ರನ್ ಕಲೆ ಹಾಕಿತ್ತು.
ಸಂಕ್ಷಿಪ್ತ ಸ್ಕೋರ್:
DD: 163/5  
ಪೃಥ್ವಿ ಶಾ: 65
SRH: 164
ಅಲೆಕ್ಸ್ ಹೇಲ್ಸ್: 45

loader