ತೆಲುಗು ಅಭಿಮಾನಿಗಳ ಹೃದಯ ಗೆದ್ದ ಸನ್’ರೈಸರ್ಸ್ ಪಡೆಯ ಈ ನಡೆ

First Published 21, May 2018, 1:56 PM IST
SunRisers Hyderabad Vote Of Thanks to SRH Fans
Highlights

‘ಧನ್ಯವಾದ ಹೈದರಾಬಾದ್’ ಎಂದು ತೆಲುಗಿನಲ್ಲಿ ಬರೆದ ಬ್ಯಾನರ್‌ವೊಂದನ್ನು ಹಿಡಿದು ಆಟಗಾರರು ಮೈದಾನವನ್ನು ಸುತ್ತು ಹಾಕಿ ಅಭಿಮಾನಿಗಳ ಬೆಂಬಲಕ್ಕೆ ಧನ್ಯವಾದ ಹೇಳಿದರು. ಸಾಮಾಜಿಕ ತಾಣಗಳಲ್ಲಿ ತಂಡದ ಈ ನಡೆಗೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

ಹೈದರಾಬಾದ್[ಮೇ.21]: ಐಪಿಎಲ್ ತಂಡಗಳು ಸ್ಥಳೀಯ ಆಟಗಾರರನ್ನು, ಸ್ಥಳೀಯ ಭಾಷೆಯನ್ನು ಕಡೆಗಣಿಸುತ್ತವೆ ಎನ್ನುವ ಆರೋಪವಿದೆ. ಆದರೆ ಸನ್‌ರೈಸರ್ಸ್‌ ಹೈದರಾಬಾದ್, ಶನಿವಾರ ತವರಿನಲ್ಲಿ ಈ ಆವೃತ್ತಿಯ ಅಂತಿಮ ಪಂದ್ಯವನ್ನಾಡಿದ ಬಳಿಕ, ಸ್ಥಳೀಯ ಭಾಷೆ ತೆಲುಗಿನಲ್ಲಿ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದು ಎಲ್ಲರ ಗಮನಸೆಳೆದಿದೆ. 
‘ಧನ್ಯವಾದ ಹೈದರಾಬಾದ್’ ಎಂದು ತೆಲುಗಿನಲ್ಲಿ ಬರೆದ ಬ್ಯಾನರ್‌ವೊಂದನ್ನು ಹಿಡಿದು ಆಟಗಾರರು ಮೈದಾನವನ್ನು ಸುತ್ತು ಹಾಕಿ ಅಭಿಮಾನಿಗಳ ಬೆಂಬಲಕ್ಕೆ ಧನ್ಯವಾದ ಹೇಳಿದರು. ಸಾಮಾಜಿಕ ತಾಣಗಳಲ್ಲಿ ತಂಡದ ಈ ನಡೆಗೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ.
ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಸನ್’ರೈಸರ್ಸ್ ಹೈದರಾಬಾದ್ ತಂಡವು ಕೋಲ್ಕತಾ ನೈಟ್’ರೈಡರ್ಸ್ ಎದುರು ಮುಗ್ಗರಿಸಿತ್ತು. ಸೋಲಿನ ಬೇಸರದ ನಡುವೆಯೂ ಮೈದಾನದಲ್ಲಿದ್ದ ಅಭಿಮಾನಿಗಳಿಗೆ ಧನ್ಯವಾದವನ್ನು ಅರ್ಪಿಸಲು ಕೇನ್ ವಿಲಿಯಮ್ಸನ್ ಪಡೆ ಮರೆಯಲಿಲ್ಲ. ಈಗಾಗಲೇ ಹೈದರಾಬಾದ್ ತಂಡವು ಪ್ಲೇ ಆಫ್ ಹಂತ ಪ್ರವೇಶಿಸಿದೆ. 

loader