ಫೈನಲ್ ಪಂದ್ಯಕ್ಕೆ ಸನ್’ರೈಸರ್ಸ್ ಹೈದರಾಬಾದ್ ಟೀಂ ಹೇಗಿರಬಹುದು..?

Sunrisers Hyderabad predicted playing XI to take on Chennai Super Kings
Highlights

2016ರ ಚಾಂಪಿಯನ್ ಸನ್’ರೈಸರ್ಸ್ ಹೈದರಾಬಾದ್ ಇದೀಗ ಮತ್ತೊಂದು ಕಪ್ ಗೆಲ್ಲುವ ಉತ್ಸಾಹದಲ್ಲಿದೆ. ಬಲಿಷ್ಠ ಬೌಲಿಂಗ್ ಲೈನ್’ಅಪ್ ಹೈದರಾಬಾದ್ ತಂಡದ ಪ್ಲಸ್ ಪಾಯಿಂಟ್. ಬ್ಯಾಟಿಂಗ್’ನಲ್ಲಿ ಮೇಲ್ನೋಟಕ್ಕೆ ಸ್ವಲ್ಪ ದುರ್ಬಲವೆನಿಸಿದರೂ, ಬಲಿಷ್ಠ ಬೌಲರ್’ಗಳ ಮೂಲಕ ಪಂದ್ಯವನ್ನು ಗೆಲ್ಲಿಸಿಕೊಡಬಲ್ಲ ಸಾಮರ್ಥ್ಯ ಕೇನ್ ವಿಲಿಯಮ್ಸನ್ ಪಡೆಗಿದೆ. 11ನೇ ಆವೃತ್ತಿಯ ಐಪಿಎಲ್’ನಲ್ಲಿ ಅಗ್ರಸ್ಥಾನಿಯಾಗಿ ಪ್ಲೇ ಆಫ್ ಹಂತ ಪ್ರವೇಶಿಸಿದ್ದರೂ ಚೆನ್ನೈ ವಿರುದ್ಧ ಮೊದಲ ಕ್ವಾಲಿಫೈಯರ್’ನಲ್ಲಿ ಮುಗ್ಗರಿಸಿ ಬಳಿಕ ಕೆಕೆಆರ್ ಎದುರು ಗೆದ್ದು ಮತ್ತೆ ಪ್ರಶಸ್ತಿ ಸುತ್ತು ಪ್ರವೇಶಿಸಿದೆ. ಇದೀಗ ಪ್ರಶಸ್ತಿಗಾಗಿ ಸಿಎಸ್’ಕೆ ತಂಡದೊಂದಿಗೆ ಇಂದು ವಾಂಖೇಡೆ ಮೈದಾನದಲ್ಲಿ ಕಾದಾಡಲಿದೆ.

ಬೆಂಗಳೂರು[ಮೇ.27]: 2016ರ ಚಾಂಪಿಯನ್ ಸನ್’ರೈಸರ್ಸ್ ಹೈದರಾಬಾದ್ ಇದೀಗ ಮತ್ತೊಂದು ಕಪ್ ಗೆಲ್ಲುವ ಉತ್ಸಾಹದಲ್ಲಿದೆ. ಬಲಿಷ್ಠ ಬೌಲಿಂಗ್ ಲೈನ್’ಅಪ್ ಹೈದರಾಬಾದ್ ತಂಡದ ಪ್ಲಸ್ ಪಾಯಿಂಟ್. ಬ್ಯಾಟಿಂಗ್’ನಲ್ಲಿ ಮೇಲ್ನೋಟಕ್ಕೆ ಸ್ವಲ್ಪ ದುರ್ಬಲವೆನಿಸಿದರೂ, ಬಲಿಷ್ಠ ಬೌಲರ್’ಗಳ ಮೂಲಕ ಪಂದ್ಯವನ್ನು ಗೆಲ್ಲಿಸಿಕೊಡಬಲ್ಲ ಸಾಮರ್ಥ್ಯ ಕೇನ್ ವಿಲಿಯಮ್ಸನ್ ಪಡೆಗಿದೆ. 11ನೇ ಆವೃತ್ತಿಯ ಐಪಿಎಲ್’ನಲ್ಲಿ ಅಗ್ರಸ್ಥಾನಿಯಾಗಿ ಪ್ಲೇ ಆಫ್ ಹಂತ ಪ್ರವೇಶಿಸಿದ್ದರೂ ಚೆನ್ನೈ ವಿರುದ್ಧ ಮೊದಲ ಕ್ವಾಲಿಫೈಯರ್’ನಲ್ಲಿ ಮುಗ್ಗರಿಸಿ ಬಳಿಕ ಕೆಕೆಆರ್ ಎದುರು ಗೆದ್ದು ಮತ್ತೆ ಪ್ರಶಸ್ತಿ ಸುತ್ತು ಪ್ರವೇಶಿಸಿದೆ. ಇದೀಗ ಪ್ರಶಸ್ತಿಗಾಗಿ ಸಿಎಸ್’ಕೆ ತಂಡದೊಂದಿಗೆ ಇಂದು ವಾಂಖೇಡೆ ಮೈದಾನದಲ್ಲಿ ಕಾದಾಡಲಿದೆ.
ಹೀಗಿರಬಹುದು ಇಂದಿನ ಸನ್’ರೈಸರ್ಸ್ ತಂಡ:
ಆರಂಭಿಕರಾಗಿ ಧವನ್-ಸಾಹ:
ಗಬ್ಬರ್ ಸಿಂಗ್ ಖ್ಯಾತಿಯ ಧವನ್ ಮೇಲೆ ಈ ಬಾರಿ ಸಾಕಷ್ಟು ನಿರೀಕ್ಷೆಗಳಿವೆ. 2010ರಲ್ಲಿ ಇದೇ ಸಿಎಸ್’ಕೆ ವಿರುದ್ಧದ ಫೈನಲ್’ನಲ್ಲಿ ಧವನ್ ಶೂನ್ಯ ಸುತ್ತಿ ನಿರಾಸೆ ಅನುಭವಿಸಿದ್ದರು. ಇಂದಿನ ಪಂದ್ಯದಲ್ಲಿ ಹಳೆಯ ನಿರಾಸೆಯನ್ನು ಮರೆಯುವ ವಿಶ್ವಾಸದೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಇವರಿಗೆ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ವೃದ್ದಿಮಾನ್ ಸಾಹ ಸಾಥ್ ನೀಡಲಿದ್ದಾರೆ.
ವಿಲಿಯಮ್ಸನ್ ಮೇಲೆ ಹೆಚ್ಚಿನ ನಿರೀಕ್ಷೆ:
ಟೂರ್ನಿಯುದ್ದಕ್ಕೂ ಸನ್’ರೈಸರ್ಸ್ ಪರ ಸ್ಥಿರ ಬ್ಯಾಟಿಂಗ್ ಪ್ರದರ್ಶಿಸಿದ್ದು ನಾಯಕ ಕೇನ್ ವಿಲಿಯಮ್ಸನ್. ಡೇವಿಡ್ ವಾರ್ನರ್ ಅನುಪಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಿರುವ ವಿಲಿಯಮ್ಸನ್’ರಿಂದ ಇಂದು ಮ್ಯಾಚ್ ವಿನ್ನಿಂಗ್ ಆಟ ಮೂಡಿ ಬರಬೇಕಿದೆ. ಇವರಿಗೆ ಮಧ್ಯಮ ಕ್ರಮಾಂಕದಲ್ಲಿ ಮನೀಶ್ ಪಾಂಡೆ, ಯೂಸುಪ್ ಪಠಾಣ್, ಶಕೀಬ್ ಅಲ್ ಹಸನ್ ಸಾಥ್ ನೀಡಲಿದ್ದಾರೆ. 11.5 ಕೋಟಿ ಮೊತ್ತಕ್ಕೆ ಹರಾಜಾಗಿರುವ ಪಾಂಡೆ ಅವರಿಂದ ಸನ್’ರೈಸರ್ಸ್ ಸಾಕಷ್ಟು ನಿರೀಕ್ಷೆಯಿಟ್ಟಿದೆ.
ಆಲ್ರೌಂಡರ್ ಪಾತ್ರದಲ್ಲಿ ಬ್ರಾಥ್’ವೈಟ್-ರಶೀದ್:
ವಿಂಡೀಸ್ ಪ್ರತಿಭೆ ಕಾರ್ಲೋಸ್ ಬ್ರಾಥ್’ವೈಟ್ ಹಾಗೂ ಸ್ಪಿನ್ ಬಿರುಗಾಳಿ ರಶೀದ್ ಖಾನ್ ಬ್ಯಾಟಿಂಗ್ ಹಾಗೂ ಬೌಲಿಂಗ್’ನಲ್ಲಿ ಕಮಾಲ್ ಮಾಡಲು ಸಜ್ಜಾಗಿದ್ದಾರೆ.
ಪ್ರಚಂಡ ಬೌಲಿಂಗ್ ಪಡೆ: ಭುವನೇಶ್ವರ್ ಕುಮಾರ್, ಸಿದ್ದಾರ್ಥ್ ಕೌಲ್, ಸಂದೀಪ್ ಶರ್ಮಾ ಅವರಂತಹ ಟಿ20 ಪರಿಣಿತ ಬೌಲರ್’ಗಳ ಬಲ ಎದುರಾಳಿ ಬ್ಯಾಟ್ಸ್’ಮನ್’ಗಳ ಎದೆಯಲ್ಲಿ ನಡುಕಹುಟ್ಟಿಸುವುದರಲ್ಲಿ ಎರಡು ಮಾತಿಲ್ಲ. ಅದರಲ್ಲೂ ಆಫ್ಘಾನ್ ಸ್ಪಿನ್ ಪ್ರತಿಭೆ ರಶೀದ್ ಖಾನ್ ಮತ್ತೊಮ್ಮೆ ಚೆನ್ನೈ ಪಡೆಯನ್ನು ಸ್ಪಿನ್ ಬಲೆಯಲ್ಲಿ ಕೆಡುವಲು ಸಜ್ಜಾಗಿದ್ದಾರೆ.

loader