ಕೇವಲ 18 ಎಸೆತಗಳನ್ನು ಎದುರಿಸಿದ ನರೈನ್ 37 ರನ್ ಸಿಡಿಸಿ ಮೈದಾನದಲ್ಲಿ ನೆರೆದಿದ್ದ ಅಬಿಮಾನಿಗಳನ್ನು ರಂಜಿಸಿದರು.

ಬೆಂಗಳೂರು(ಏ.17): ಕೋಲ್ಕತಾ ನೈಟ್'ರೈಡರ್ಸ್ ತಂಡದ ಸುನಿಲ್ ನರೈನ್ ಪ್ರಚಂಡ ಸ್ಪಿನ್ನರ್ ಅಂತ ಯಾರಿಗೆ ಗೊತ್ತಿಲ್ಲ ಹೇಳಿ...

ಅದ್ಭುತ ಬೌಲಿಂಗ್ ಕೈಚಳಕದ ಮೂಲಕ ಎದುರಾಳಿ ಬ್ಯಾಟ್ಸ್'ಮನ್'ಗಳನ್ನು ಕಂಗೆಡಿಸುವ ನರೈಸ್ ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧ ನಡೆದ ಪಂದ್ಯದಲ್ಲಿ ತಾನೊಬ್ಬ ಟಿ20 ಕ್ರಿಕೆಟ್'ಗೆ ಸೂಕ್ತ ಆರಂಭಿಕ ಎನ್ನುವುದನ್ನು ಸಾಬೀತುಪಡಿಸಿದ್ದಾರೆ.

ನೈಟ್ ರೈಡರ್ಸ್ ತಂಡದ ಆರಂಬಿಕ ಬ್ಯಾಟ್ಸ್'ಮನ್ ಕ್ರಿಸ್ ಲಿನ್ ಗಾಯಗೊಂಡು ತಂಡದಿಂದ ಹೊರಬಿದ್ದಿದ್ದಾರೆ. ಹೀಗಾಗಿ ಹೊಸ ಪ್ರಯೋಗವೆಂಬಂತೆ 10ನೇ ಕ್ರಮಾಂಕದ ಬ್ಯಾಟ್ಸ್'ಮನ್ ನರೈನ್ ಆರಂಭಿಕನಾಗಿ ಬಡ್ತಿ ಪಡೆದು ಕಿಂಗ್ಸ್ ಇಲೆವನ್ ಬೌಲರ್'ಗಳನ್ನು ಚಂಡಾಡಿದರು.

ಕೇವಲ 18 ಎಸೆತಗಳನ್ನು ಎದುರಿಸಿದ ನರೈನ್ 37 ರನ್ ಸಿಡಿಸಿ ಮೈದಾನದಲ್ಲಿ ನೆರೆದಿದ್ದ ಅಬಿಮಾನಿಗಳನ್ನು ರಂಜಿಸಿದರು.

ಹೀಗಿತ್ತು ನರೈನ್ ಬ್ಯಾಟಿಂಗ್ ಗಮ್ಮತ್ತು...

ವಿಡಿಯೋ ಕೃಪೆ: ಐಪಿಎಲ್