ಬೆಂಗಳೂರು ಎಫ್‌ಸಿ ಜೊತೆ ಒಪ್ಪಂದ ಮುಂದುವರಿಸಿದ ಸುನಿಲ್ ಚೆಟ್ರಿ

First Published 24, Jul 2018, 8:17 PM IST
Sunil Chhetri extends stay with Bengaluru FC
Highlights

ಬೆಂಗಳೂರು ಎಫ್‌ಸಿ ತಂಡದ ನಾಯಕ ಸುನಿಲ್ ಚೆಟ್ರಿ ಕನ್ನಡಿಗರಿಗೆ ಸಿಹಿ ಸುದ್ದಿ ನೀಡಿದ್ದಾರೆ. ಬಿಎಫ್‌ಸಿ ಜೊತೆಗೆ ಒಪ್ಪಂದ ಮುಂದವಿರಿಸಲು ಚೆಟ್ರಿ ನೀಡಿದ ಕಾರಣವೇನು? ಇಲ್ಲಿದೆ ವಿವರ.

ಬೆಂಗಳೂರು(ಜು.24): ಟೀಂ ಇಂಡಿಯಾ ಫುಟ್ಬಾಲ್ ಹಾಗೂ ಬೆಂಗಳೂರು ಎಫ್ ಸಿ ತಂಡದ ನಾಯಕ ಸುನಿಲ್ ಚೆಟ್ರಿ ಬೆಂಗಳೂರಿಗರಿಗೆ ಸಿಹಿ ಸುದ್ದಿ ನೀಡಿದ್ದಾರೆ. ನಾಯಕ ಸುನಿಲ್ ಚೆಟ್ರಿ ತಮ್ಮ ಬೆಂಗಳೂರು ಎಫ್‌ಸಿ  ಜೊತೆಗಿನ ಒಪ್ಪಂದವನ್ನ ಮುಂದುವರಿಸಿದ್ದಾರೆ.

ಬಿಫ್‌ಸಿ ಜೊತೆ ಇದೀಗ 3 ವರ್ಷಗಳ ಒಪ್ಪಂದಕ್ಕೆ ಚೆಟ್ರಿ ಸಹಿ ಹಾಕಿದ್ದಾರೆ. 2013ರಲ್ಲಿ ಬಿಎಫ್‌ಸಿ ತಂಡ ಆರಂಭವಾಗಿನಿಂದಲೂ ಚೆಟ್ರಿ ಬೆಂಗಳೂರು ತಂಡದ ಜೊತೆಗೆ ಗುರುತಿಸಿಕೊಂಡಿದ್ದಾರೆ. ಈ ಮೂಲಕ ಸುದೀರ್ಘ ಅವಧಿಗೆ ಬಿಎಫ್‌ಸಿ ಜೊತೆ ಒಪ್ಪಂದ ಮಾಡಿಕೊಂಡ ಏಕೈಕ ಫುಟ್ಬಾಲ್ ಪಟು ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಬೆಂಗಳೂರು ಎಫ್‌ಸಿ ಹಾಗೂ ಇಲ್ಲಿನ ಅಭಿಮಾನಿಗಳ ನನ್ನ ಜೀವನದ ಭಾಗವಾಗಿದೆ. ಹೀಗಾಗಿ ಈ ಕ್ಲಬ್ ಬಿಟ್ಟು ಹೋಗಲು ನನ್ನಿಂದ ಸಾಧ್ಯವಿಲ್ಲ. ಬಿಎಫ್‌ಸಿ ನನಗೆ ಎಲ್ಲವನ್ನೂ ನೀಡಿದೆ. ಈಗ ನಾನು ಬಿಎಫ್‌ಸಿಗಾಗಿ ನನ್ನಿಂದ ಕೈಲಾದಷ್ಟು ಸೇವೆ ನೀಡಬೇಕು ಎಂದು ಸುನಿಲ್ ಚೆಟ್ರಿ ಹೇಳಿದ್ದಾರೆ.
 

loader