28ನೇ ಅಜ್ಲಾನ್ ಶಾ ಹಾಕಿ ಟೂರ್ನಿಗೆ ಭಾರತ ತಂಡ ಪ್ರಕಟಗೊಂಡಿದ್ದು, ಅನುಭವಿ ಆಟಗಾರರ ಅನುಪಸ್ಥಿತಿಯಲ್ಲಿ ಯುವ ಆಟಗಾರರನ್ನೊಳಗೊಂಡ ತಂಡವನ್ನು ಮನ್‌ಪ್ರೀತ್ ಸಿಂಗ್ ಮುನ್ನಡೆಸಲಿದ್ದಾರೆ.
ಬೆಂಗಳೂರು(ಮಾ.07): ಮಾ.23ರಿಂದ 30ರ ವರೆಗೂ ಮಲೇಷ್ಯಾದ ಇಫೋನಲ್ಲಿ ನಡೆಯಲಿರುವ 28ನೇ ಅಜ್ಲಾನ್ ಶಾ ಹಾಕಿ ಟೂರ್ನಿಗೆ ಭಾರತ ತಂಡ ಪ್ರಕಟಗೊಂಡಿದೆ.
ತಾರಾ ಆಟಗಾರರಾದ ಎಸ್.ವಿ.ಸುನಿಲ್, ಆಕಾಶ್‌ದೀಪ್ ಸಿಂಗ್, ರಮಣ್‌ದೀಪ್, ಲಲಿತ್ ಉಪಾಧ್ಯಾಯ, ರೂಪಿಂದರ್ ಪಾಲ್, ಹರ್ಮನ್‌ಪ್ರೀತ್, ಚಿಂಗ್ಲೆನ್ಸಾನ ಸಿಂಗ್ ಗಾಯಗೊಂಡಿದ್ದು ತಂಡದಲ್ಲಿ ಸ್ಥಾನ ಪಡೆದಿಲ್ಲ. ಅನನುಭವಿ ತಂಡವನ್ನು ಮನ್‌ಪ್ರೀತ್ ಮುನ್ನಡೆಸಲಿದ್ದು, ಸುರೇಂದರ್ ಕುಮಾರ್ ನೂತನ ಉಪನಾಯಕನಾಗಿ ನೇಮಕಗೊಂಡಿದ್ದಾರೆ.
ಟೂರ್ನಿಯಲ್ಲಿ ಭಾರತ, ಮಲೇಷ್ಯಾ, ದ.ಕೊರಿಯಾ, ಜಪಾನ್, ಕೆನಡಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಪಾಲ್ಗೊಳ್ಳಲಿವೆ. ಮೊದಲ ದಿನವೇ ಭಾರತ ತಂಡವು ಜಪಾನ್ ಎದುರು ಕಾದಾಡಲಿದೆ.
ತಂಡ: ಗೋಲ್ ಕೀಪರ್ಸ್: ಶ್ರೀಜೇಶ್, ಕೃಷನ್ ಪಾಠಕ್.
ಡಿಫೆಂಡರ್ಸ್: ಗುರಿಂದರ್, ಸುರೇಂದರ್, ವರುಣ್, ಬೀರೇಂದ್ರ, ಅಮಿತ್, ಕೊಥಾಜಿತ್.
ಮಿಡ್‌ಫೀಲ್ಡರ್ಸ್: ಹಾರ್ದಿಕ್, ನೀಲಕಂಠ, ಸುಮಿತ್, ವಿವೇಕ್, ಮನ್‌ಪ್ರೀತ್.
ಫಾರ್ವರ್ಡ್ಸ್: ಮನ್‌ದೀಪ್, ಸಿಮ್ರನ್‌ಜೀತ್, ಗುರ್ಜಂತ್, ಶಿಲಾನಂದ, ಸುಮಿತ್ ಕುಮಾರ್.
