ನೋಯ್ಡಾ(ಸೆ.15): ಇದೇ ಮೊದಲ ಬಾರಿಗೆ ದುಲೀಪ್​ ಟ್ರೋಫಿ ಟೂರ್ನಿಯನ್ನು ಸಾಕಷ್ಟು ಬದಲಾವಣೆಗಳೊಂದಿಗೆ ನಡೆಸಲಾಗಿತ್ತು. ಇದು ಯಶಸ್ವಿಯೂ ಆಗಿದೆ. ಭಾರತದಲ್ಲೂ ಹೊನಲು ಬೆಳಕು ಪಂದ್ಯದಲ್ಲಿ ಪಿಂಕ್ ಬಾಲ್ ಬಳಕೆ ಯಶಸ್ವಿಯಾಗಿದೆ.

ದೇಸಿ ಟೂರ್ನಿಗಳಿಗೆ ಅಭಿಮಾನಿಗಳನ್ನು ಸೆಳೆಯುವ ದೃಷ್ಠಿಯಿಂದ ಹೊನಲು ಬೆಳಕಿನಲ್ಲಿ ಟೂರ್ನಿಯನ್ನು ಆಯೋಜನೆ ಮಾಡಲಾಗಿತ್ತು. ಇದು ಯಶಸ್ವಿಯಾಗಿದ್ದು, ಸಾಕಷ್ಟು ಅಭಿಮಾನಿಗಳು ಮೈದಾನಲ್ಲಿ ಕಾಣಿಸಿದ್ದು ಸಮಾಧಾನದ ವಿಷಯವಾಗಿದೆ.

ಪಿಂಕ್​ ಬಾಲ್​​ ಪ್ರಯೋಗ ಕೂಡ ಇದೇ ಟೂರ್ನಿಯಲ್ಲಿ ನಡೆದಿದ್ದು, ಆಟಗಾರರಿಂದಲೂ ಉತ್ತಮ ಪ್ರತಿಕ್ರಿಯೆಗಳು ಬಂದಿವೆ. ಬೌಲಿಂಗ್​​ ಹಾಗೂ ಬ್ಯಾಟಿಂಗ್​​ ಎರಡೂ ವಿಭಾಗಕ್ಕೂ ಈ ಬಾಲ್​ ನೆರವಾಗಿರೋದು ವಿಶೇಷವಾಗಿದ್ದು, ಪೈಪೋಟಿದಾಯಕ ಪಂದ್ಯಗಳನ್ನೇ ನೀಡಿದೆ.