ಐಪಿಎಲ್ ಆರಂಭದ ಮೊದಲ 5 ವರ್ಷಗಳ ಕಾಲ ಚೆನ್ನೈ ಸೂಪರ್’ಕಿಂಗ್ಸ್ ತಂಡದ ಅವಿಭಾಜ್ಯ ಅಂಗವೆನಿಸಿಕೊಂಡಿದ್ದ ಬದ್ರಿನಾಥ್, 2015ರಲ್ಲಿ ಆರ್’ಸಿಬಿ ತಂಡ ಕೂಡಿಕೊಂಡಿದ್ದರು. 

ಬೆಂಗಳೂರು[ಮೇ.10]: ಟೀಂ ಇಂಡಿಯಾ ಹಾಗೂ ಚೆನ್ನೈ ಸೂಪರ್’ಕಿಂಗ್ಸ್ ತಂಡದ ಮಾಜಿ ಕ್ರಿಕೆಟಿಗ ಸುಬ್ರಮಣಿಯನ್ ಬದ್ರಿನಾಥ್ ಎಲ್ಲಾ ಮಾದರಿಯ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಲಿದ್ದಾರೆ ಎಂದು ವರದಿಯಾಗಿದೆ.
ಪ್ರಸ್ತುತ ವೀಕ್ಷಕ ವಿವರಣೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದು, ಐಪಿಎಲ್ ಮುಕ್ತಾಯದ ಬಳಿಕ ಬದ್ರಿನಾಥ್ ಕ್ರಿಕೆಟ್’ಗೆ ಗುಡ್’ಬೈ ಹೇಳಲಿದ್ದಾರೆ ಎನ್ನಲಾಗಿದೆ. 
ಐಪಿಎಲ್ ಆರಂಭದ ಮೊದಲ 5 ವರ್ಷಗಳ ಕಾಲ ಚೆನ್ನೈ ಸೂಪರ್’ಕಿಂಗ್ಸ್ ತಂಡದ ಅವಿಭಾಜ್ಯ ಅಂಗವೆನಿಸಿಕೊಂಡಿದ್ದ ಬದ್ರಿನಾಥ್, 2015ರಲ್ಲಿ ಆರ್’ಸಿಬಿ ತಂಡ ಕೂಡಿಕೊಂಡಿದ್ದರು. ಆದರೆ ಅವರಿಗೆ ತಂಡದಲ್ಲಿ ಆಡಲು ಅವಕಾಶ ಸಿಕ್ಕಿರಲಿಲ್ಲ. 

ಇದನ್ನು ಓದಿ:ಅಂದು ದಿಲೀಪ್ ವೆಂಗಸರ್ಕರ್ ತಮ್ಮ ವೃತ್ತಿಜೀವನ ತ್ಯಾಗ ಮಾಡದಿದ್ದರೆ ಕೊಹ್ಲಿ ಉದಯವಾಗುತ್ತಿರಲಿಲ್ಲ

2008ರಲ್ಲಿ ಶ್ರೀಲಂಕಾ ವಿರುದ್ಧ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ ಬದ್ರಿನಾಥ್, 2010ರಲ್ಲಿ ಟೆಸ್ಟ್ ಕ್ರಿಕೆಟ್’ಗೂ ಎಂಟ್ರಿ ಕೊಟ್ಟಿದ್ದರು. ಪ್ರಥಮ ದರ್ಜೆ ಕ್ರಿಕೆಟ್’ನಲ್ಲಿ 10 ಸಾವಿರಕ್ಕೂ ಹೆಚ್ಚು ರನ್ ಕಲೆಹಾಕಿರುವ ಬದ್ರಿನಾಥ್ ಟೀಂ ಇಂಡಿಯಾದಲ್ಲಿ ಬೇರೂರಲು ಸಾಧ್ಯವಾಗಲಿಲ್ಲ.