ಇತ್ತೀಚೆಗಷ್ಟೇ ಮಾಜಿ ನಾಯಕ ಸ್ಮಿತ್‌ ಮತ್ತು ಬೆನ್‌’ಕ್ರಾಫ್ಟ್‌ ಚೆಂಡು ವಿರೂಪ ಪ್ರಕರಣದ ಕುರಿತು ಮಾಹಿತಿ ಬಿಚ್ಚಿಟ್ಟಿದ್ದರು. ಬಾಲ್ ಟ್ಯಾಂಪರಿಂಗ್ ಪ್ರಕರಣದ ಪ್ರಮುಖ ರೂವಾರಿ ಡೇವಿಡ್ ವಾರ್ನರ್ ಅವರದ್ದಾಗಿತ್ತು ಎಂದು ಬೆನ್’ಕ್ರಾಪ್ಟ್ ಬಾಯಿಬಿಟ್ಟಿದ್ದರು.

ಮೆಲ್ಬರ್ನ್‌(ಡಿ.28): ಚೆಂಡು ವಿರೂಪ ಪ್ರಕರಣದಲ್ಲಿ ಸ್ಮಿತ್‌ ಜಾಣ ಕುರುಡುತನ ಪ್ರದರ್ಶಿಸಬಾರದಿತ್ತು. ಅವರು ಮಾಡಿದ ತಪ್ಪಿನಿಂದಾಗಿ ಬಹಳಷ್ಟು ಜನರು ತೊಂದರೆ ಅನುಭವಿಸಿದ್ದಾರೆ ಎಂದು ಮಾಜಿ ಕೋಚ್‌ ಡರೆನ್‌ ಲೆಹ್ಮನ್‌ ಬೇಸರ ವ್ಯಕ್ತಪಡಿಸಿದ್ದಾರೆ. 

ಬಾಲ್ ಟ್ಯಾಂಪರಿಂಗ್ ಮಾಸ್ಟರ್ ಮೈಂಡ್ ವಾರ್ನರ್ ಅಂತೆ..!

ಚೆಂಡು ವಿರೂಪ ಪ್ರಕರಣದಿಂದಾಗಿ ಲೆಹ್ಮನ್‌, ತಮ್ಮ ಪ್ರಧಾನ ಕೋಚ್‌ ಹುದ್ದೆಗೆ ರಾಜೀನಾಮೆ ನೀಡಿದ್ದರು. ‘ಸ್ಮಿತ್‌, ಯೋಚಿಸದೆ ಚೆಂಡು ವಿರೂಪಗೊಳಿಸಲು ನಿರ್ಧರಿಸಿದ್ದರು. ರಾಷ್ಟ್ರೀಯ ತಂಡದ ನಾಯಕನಾಗಿ ಭಾವೋದ್ವೇಗಕ್ಕೆ ಒಳಗಾಗದೇ, ಇಂಥ ವಿಷಯಗಳ ಮೇಲೆ ನಿಯಂತ್ರಣ ಸಾಧಿಸಬೇಕು’ ಎಂದಿದ್ದಾರೆ. 