ಸ್ಮಿತ್ ಕನಸಿನ ತಂಡದಲ್ಲಿ ಕೊಹ್ಲಿಯಿಲ್ಲ: ಭಾರತದ ಇಬ್ಬರಿಗೆ ಸ್ಥಾನ

ಕೋಲ್ಕತಾ(ಸೆ.21): ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಸ್ಟೀವ್ ಸ್ಮಿತ್ ಕನಸಿನ ತಂಡದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಸ್ಥಾನವಿಲ್ಲ. ಆದರೆ ಮಾಜಿ ಆಟಗಾರರಾದ ಸಚಿನ್ ತೆಂಡುಲ್ಕರ್ ಹಾಗೂ ಹರ್ಭಜನ್ ಸಿಂಗ್‌ಗೆ ಸ್ಥಾನ ಪಡೆದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೊಹ್ಲಿಗೆ ಸ್ಥಾನ ನೀಡದಿರದಿರುವುದಕ್ಕೆ ಸ್ಪಷ್ಟನೆ ನೀಡಿರುವ ಸ್ಮಿತ್, ತಮಗೆ ಅವರೊಂದಿಗೆ ಯಾವುದೇ ದ್ವೇಷವಿಲ್ಲ. ಆಟಗಾರನಾಗಿ ಅವರನ್ನು ಗೌರವಿಸುತ್ತೇನೆ. ಆದರೆ ಯಾವುದೇ ಆಟಗಾರರೊಂದಿಗೆ ವೈರತ್ವ ಸಾಧಿಸುವುದನ್ನು ನಾನು ಇಷ್ಟ ಪಡುವುದಿಲ್ಲ’ ಎಂದು ತಿಳಿಸಿದ್ದಾರೆ.