ನಾನು ಯಾರೊಬ್ಬರನ್ನು ದೂಷಿಸುವುದಿಲ್ಲ. ಕಳೆದ ಶನಿವಾರ ನಡೆದ ಘಟನೆಯ ಕುರಿತಂತೆ ಆಸ್ಟ್ರೇಲಿಯಾ ತಂಡದ ನಾಯಕನಾಗಿ ಎಲ್ಲಾ ಹೊಣೆಹೊರುತ್ತೇನೆ. ಇದು ನನ್ನ ನಾಯಕತ್ವದ ಅತಿ ದೊಡ್ಡ ಪ್ರಮಾದ ಎಂದು ಸ್ಮಿತ್ ಹೇಳಿದ್ದಾರೆ.

ಸಿಡ್ನಿ(ಮಾ.29): ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ವರ್ಷ ನಿಷೇಧದ ಶಿಕ್ಷೆಗೆ ಗುರಿಯಾಗಿರುವ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಕೊನೆಗೂ ಮೌನ ಮುರಿದಿದ್ದು, ಸುದ್ದಿಗೋಷ್ಠಿಯಲ್ಲೇ ಮಾಡಿದ ತಪ್ಪಿಗೆ ಕಣ್ಣೀರಿಟ್ಟಿದ್ದಾರೆ.

ನಾನು ಯಾರೊಬ್ಬರನ್ನು ದೂಷಿಸುವುದಿಲ್ಲ. ಕಳೆದ ಶನಿವಾರ ನಡೆದ ಘಟನೆಯ ಕುರಿತಂತೆ ಆಸ್ಟ್ರೇಲಿಯಾ ತಂಡದ ನಾಯಕನಾಗಿ ಎಲ್ಲಾ ಹೊಣೆಹೊರುತ್ತೇನೆ. ಇದು ನನ್ನ ನಾಯಕತ್ವದ ಅತಿ ದೊಡ್ಡ ಪ್ರಮಾದ ಎಂದು ಸ್ಮಿತ್ ಹೇಳಿದ್ದಾರೆ.

ಇದನ್ನು ನೋಡಿ: ಸ್ಟೀವ್ ಸ್ಮಿತ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು ಹೀಗೆ....

ಕ್ರಿಕೆಟ್ ಜಗತ್ತಿನ ಶ್ರೇಷ್ಠ ಕ್ರೀಡೆ. ಕ್ರಿಕೆಟ್ ನನ್ನೆಲ್ಲ ಜಗತ್ತು, ನಾನು ಮತ್ತೆ ಕಮ್'ಬ್ಯಾಕ್ ಮಾಡುತ್ತೇನೆ. ನನ್ನನ್ನು ಕ್ಷಮಿಸಿ ಎಂದು ಅಭಿಮಾನಿಗಳ ಕ್ಷಮೆ ಕೋರಿದ್ದಾರೆ.

ಒಂದಂತೂ ಸತ್ಯ, ಈ ಘಟನೆ ಬೇರೆಯವರಿಗೆ ಒಂದು ಪಾಠವಾಗಲಿದೆ, ನಾನು ಇದರಿಂದ ಪಾಠ ಕಲಿತಿದ್ದು, ಮುಂದಿನ ದಿನಗಳಲ್ಲಿ ಕಳೆದುಕೊಂಡ ಗೌರವವನ್ನು ಮರಳಿ ಪಡೆಯುತ್ತೇನೆ ಎಂದು ಸ್ಮಿತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.