ಶುಕ್ರವಾರ ರಾತ್ರಿ ಆಸ್ಟ್ರೇಲಿಯಾ ಏಕದಿನ ತಂಡದ ಮೊದಲ ಬ್ಯಾಚ್ ಭಾರತಕ್ಕೆ ಆಗಮಿಸಿತ್ತು.
ಮುಂಬೈ(ಸೆ.10): ನಾಯಕ ಸ್ಟೀವ್ ಸ್ಮಿತ್'ರನ್ನು ಒಳಗೊಂಡ ಆಸ್ಟ್ರೇಲಿಯಾ ಏಕದಿನ ತಂಡ ಶನಿವಾರ ರಾತ್ರಿ ಭಾರತಕ್ಕೆ ಬಂದಿಳಿದಿದೆ.
ಸೆ.17ರಿಂದ ಭಾರತ- ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಗೆ ಚಾಲನೆ ದೊರೆಕಲಿದ್ದು, ಸ್ಮಿತ್ ಹಾಗೂ ಉಪನಾಯಕ ಡೇವಿಡ್ ವಾರ್ನರ್ ಸೇರಿದಂತೆ ಐವರು ಆಟಗಾರರು ಢಾಕಾದಿಂದ ಮುಂಬೈಗೆ ಬಂದಿಳಿದರು.
ಶುಕ್ರವಾರ ರಾತ್ರಿ ಆಸ್ಟ್ರೇಲಿಯಾ ಏಕದಿನ ತಂಡದ ಮೊದಲ ಬ್ಯಾಚ್ ಭಾರತಕ್ಕೆ ಆಗಮಿಸಿತ್ತು. ಭಾರತ ವಿರುದ್ಧ ಆಸ್ಟ್ರೇಲಿಯಾ 5 ಏಕದಿನ, 3 ಟಿ20 ಪಂದ್ಯಗಳ ಸರಣಿಯನ್ನಾಡಲಿದೆ.
