ಇತಿಹಾಸದ ಆ ದಿನ, ಅದು 1877ರ ಮಾರ್ಚ್ 15ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯಾ-ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗುವುದರೊಂದಿಗೆ ಮೊದಲ ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಆರಂಭವಾಯಿತು.

ಆಸ್ಟ್ರೇಲಿಯಾದ ಕೆಂಟ್ ಮೂಲದ ಚಾರ್ಲ್ಸ್ ಬ್ಯಾನರ್’ಮನ್, ಇಂಗ್ಲೆಂಡ್’ನ ಆಲ್ಫ್ರೆಡ್ ಶಾ ಅವರ ಮೊದಲ ಎಸೆತವನ್ನು ಎದುರಿಸಿದರು. ಎರಡನೇ ಎಸೆತದಲ್ಲೇ ರನ್ ಕಲೆಹಾಕುವ ಮೂಲಕ ಟೆಸ್ಟ್ ಕ್ರಿಕೆಟ್’ಗೆ ರನ್ ಗಳಿಕೆಗೆ ಅಧಿಕೃತ ಚಾಲನೆ ನೀಡಿದರು. ಆ ಬಳಿಕ ಇಂದಿಗೆ ಸರಿಯಾಗಿ 142 ವರ್ಷಗಳಲ್ಲಿ ಇದುವರೆಗೆ ಲಕ್ಷಾಂತರ ರನ್’ಗಳು ಟೆಸ್ಟ್ ಕ್ರಿಕೆಟ್’ನಲ್ಲಿ ಹರಿದಾಡಿವೆ. ಅಪರೂಪದ ದಾಖಲೆಗಳು ನಿರ್ಮಾಣವಾಗಿವೆ. ಟೆಸ್ಟ್ ಕ್ರಿಕೆಟ್’ನಲ್ಲಿ ಗರಿಷ್ಠ ಪಂದ್ಯ, ರನ್ ಹಾಗೂ ಶತಕ ಸಿಡಿಸಿದ ದಾಖಲೆಗಳು ಸಚಿನ್ ತೆಂಡುಲ್ಕರ್ ಹೆಸರಿನಲ್ಲಿದ್ದರೆ, ಕನ್ನಡಿಗ ಅನಿಲ್ ಕುಂಬ್ಳೆ ಇನ್ನಿಂಗ್ಸ್’ವೊಂದರಲ್ಲಿ ಎಲ್ಲಾ 10 ವಿಕೆಟ್ ಕಬಳಿಸುವ ಮೂಲಕ ಜಿಮ್ ಲೇಕರ್ ದಾಖಲೆ ಸರಿಗಟ್ಟಿದ್ದಾರೆ.

ಟೆಸ್ಟ್ ಕ್ರಿಕೆಟ್’ನ ಒಂದು ಹಿನ್ನೋಟವನ್ನು ಸುವರ್ಣನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದ್ದೇವೆ...   

ಮೊದಲ ಪಂದ್ಯದ ಸಂಪೂರ್ಣ ಸ್ಕೋರ್ ಕಾರ್ಡ್:

ಕೃಪೆ: espncricinfo.com