Asianet Suvarna News Asianet Suvarna News

ಮರ್ರೆಗೆ ಶಾಕ್ ನೀಡಿದ ವಾವ್ರಿಂಕಾ ಪೈನಲ್'ಗೆ ಲಗ್ಗೆ

ಸುಮಾರು 4 ಗಂಟೆ 34 ನಿಮಿಷಗಳ ಕಾಲ ನಡೆದ ಜಿದ್ದಾಜಿದ್ದಿನ ಕಾದಾಟದಲ್ಲಿ ವಾವ್ರಿಂಕಾ ಬ್ರಿಟನ್ ಆಟಗಾರನನ್ನು ಮಣಿಸಿ, ಇದೇ ಮೊದಲ ಬಾರಿಗೆ ಫ್ರೆಂಚ್ ಓಪನ್ ಫೈನಲ್ ಪ್ರವೇಶಿಸಿದರು.

Stan Wawrinka avenges loss to Andy Murray to reach French Open 2017 final
  • Facebook
  • Twitter
  • Whatsapp

ಪ್ಯಾರಿಸ್(ಜೂ.09): ವಿಶ್ವದ ನಂ.1 ಶ್ರೇಯಾಂಕಿತ ಬ್ರಿಟನ್'ನ ಆ್ಯಂಡಿ ಮರ್ರೆಯನ್ನು ಮಣಿಸಿದ ಸ್ಟಾನಿಸ್ಲಾಸ್ ವಾವ್ರಿಂಕಾ ಫ್ರೆಂಚ್ ಓಪನ್ ಪುರುಷರ ಸಿಂಗಲ್ಸ್'ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ.

ಭಾರೀ ರೋಚಕತೆಯಿಂದ ಕೂಡಿದ್ದ ಸೆಮಿಫೈನಲ್ ಪಂದ್ಯದಲ್ಲಿ ಆ್ಯಂಡಿ ಮರ್ರೆ ವಿರುದ್ಧ ವಾವ್ರಿಂಕಾ 6-7(6-8), 6-3, 5-7, 7-6(7-3),6-1 ಸೆಟ್‌'ಗಳ ಅಂತರದಲ್ಲಿ ಭರ್ಜರಿ ಗೆಲುವು ದಾಖಲಿಸಿದರು.

ಸುಮಾರು 4 ಗಂಟೆ 34 ನಿಮಿಷಗಳ ಕಾಲ ನಡೆದ ಜಿದ್ದಾಜಿದ್ದಿನ ಕಾದಾಟದಲ್ಲಿ ವಾವ್ರಿಂಕಾ ಇದೇ ಮೊದಲ ಬಾರಿಗೆ ಫ್ರೆಂಚ್ ಓಪನ್ ಫೈನಲ್ ಪ್ರವೇಶಿಸಿದರು.

ಒಂದೂ ಸೆಟ್ ಸೋಲದೆ ಸೆಮಿಫೈನಲ್ ವರೆಗೂ ಸಾಗಿ ಬಂದಿದ್ದ ವಾವ್ರಿಂಕಾಗೆ ಮೊದಲ ಸೆಟ್‌'ನಲ್ಲೇ ಆಘಾತ ಎದುರಾಯಿತು. ಆದರೆ ದ್ವಿತೀಯ ಸೆಟ್‌'ನಲ್ಲಿ ತಿರುಗಿಬಿದ್ದ ಸ್ವಿಸ್ ಆಟಗಾರ, ಮೂರನೇ ಸೆಟ್‌'ನಲ್ಲಿ ಮತ್ತೆ ಮುಗ್ಗರಿಸಿದರು.

ಟೈ ಬ್ರೇಕರ್ ಮೂಲಕ 4ನೇ ಸೆಟ್ ಗೆಲ್ಲುತ್ತಿದ್ದಂತೆ ವಾವ್ರಿಂಕಾ ಆತ್ಮವಿಶ್ವಾಸ ಇಮ್ಮಡಿಗೊಂಡಿತು. 5ನೇ ಹಾಗೂ ಕೊನೆಯ ಸೆಟ್‌ನಲ್ಲಿ 5-0 ಗೇಮ್‌'ಗಳ ಮುನ್ನಡೆ ಕಾಯ್ದುಕೊಂಡಿದ್ದ ಸ್ವಿಸ್ ಆಟಗಾರ, ಸರ್ವ್ ಕಳೆದುಕೊಳ್ಳುವ ಮೂಲಕ ಒಂದು ಗೇಮ್ ಬಿಟ್ಟುಕೊಟ್ಟರು. ಆದರೆ ಮರು ಗೇಮ್‌'ನಲ್ಲೇ ಮರ್ರೆ ಸರ್ವ್ ಮುರಿದ ವಾವ್ರಿಂಕಾ, ಪಂದ್ಯವನ್ನು ತಮ್ಮದಾಗಿಸಿಕೊಂಡು ಗೆಲುವಿನ ನಿಟ್ಟುಸಿರು ಬಿಟ್ಟರು.

Follow Us:
Download App:
  • android
  • ios