Asianet Suvarna News Asianet Suvarna News

ಶ್ರೀಲಂಕಾ ಮುಖ್ಯ ಕೋಚ್‌ಗೆ ಶಾಕ್; ತಂಡದಲ್ಲಿ ಮಹತ್ತರ ಬದಲಾವಣೆ!

ವಿಶ್ವಕಪ್ ಸೋಲಿನ ಬಳಿಕ ತಂಡಕ್ಕೆ ಸರ್ಜರಿ ಮಾಡಲು ಮುಂದಾಗಿರುವ ಲಂಕಾ ಕ್ರಿಕೆಟ್ ಮಂಡಳಿ, ಇದೀಗ  ಮುಖ್ಯ ಕೋಚ್‌‌ಗೆ ಕೊಕ್ ನೀಡಲು ಸಜ್ಜಾಗಿದೆ. ಬಾಂಗ್ಲಾದೇಶ ವಿರುದ್ದದ ಸರಣಿ ಬಳಿಕ ಲಂಕಾ ತಂಡದಲ್ಲಿ ಮಹತ್ತರ ಬದಲಾವಣೆಯಾಗಲಿದೆ. 

Srilanka cricket ask head coach Chandika Hathurusingha to steps down
Author
Bengaluru, First Published Jul 24, 2019, 5:15 PM IST
  • Facebook
  • Twitter
  • Whatsapp

ಕೊಲೊಂಬೊ(ಜು.24): ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ಹೀನಾಯ ಪ್ರದರ್ಶನ ಮಂಡಳಿ ಪಿತ್ತ ನೆತ್ತಿಗೇರಿಸಿದೆ. ವಿಶ್ವಕಪ್ ಟೂರ್ನಿಯಲ್ಲಿ ಉತ್ತಮ ಟ್ರ್ಯಾಕ್ ರೆಕಾರ್ಡ್ ಹೊಂದಿರುವ ಶ್ರೀಲಂಕಾ, ಈ ಬಾರಿ  ಕಳಪೆ ಪ್ರದರ್ಶನ ನೀಡಿದೆ. ಇದೀಗ ಲಂಕಾ ಕ್ರಿಕೆಟ್ ಮಂಡಳಿ, ತಂಡದ ಮೊದಲ ವಿಕೆಟ್ ಪತನಕ್ಕೆ ಮೂಹೂರ್ತ ಫಿಕ್ಸ್ ಮಾಡಿದೆ.

ಇದನ್ನೂ ಓದಿ: ಯಾರಾಗ್ತಾರೆ ಟೀಂ ಇಂಡಿಯಾ ಮುಂದಿನ ಕೋಚ್..?

ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿ ಬಳಿಕ ಶ್ರೀಲಂಕಾ ಮುಖ್ಯ ಕೋಚ್ ಚಂದಿಕ ಹತುರುಸಿಂಗ ರಾಜಿನಾಮೆ ನೀಡಲು ಕ್ರಿಕೆಟ್ ಮಂಡಳಿ ಸೂಚಿಸಿದೆ. ಮುಂದಿನ ವರ್ಷದ ಅಂತ್ಯಕ್ಕೆ ಲಂಕಾ ಕೋಚ್ ಅವದಿ ಮುಕ್ತಾಯಗೊಳ್ಳಲಿದೆ. ಆದರೆ ಕಳಪೆ ಪ್ರದರ್ಶನಕ್ಕೆ ಬೇಸತ್ತಿರುವ ಲಂಕಾ ಕ್ರಿಕೆಟ್ ಮಂಡಳಿ ಮುಖ್ಯ ಕೋಚ್‌ಗೆ ರಾಜಿನಾಮೆ ನೀಡಲು ತಾಕೀತು ಮಾಡಿದೆ.

ಇದನ್ನೂ ಓದಿ: ಕಟ್ಟಕಡೆಯ ಅಂತಾರಾಷ್ಟ್ರೀಯ ಪಂದ್ಯವನ್ನಾಡಲು ಸಜ್ಜಾದ ಮಾಲಿಂಗ

ಚಂದಿಕ ಹತುರುಸಿಂಗ 2017ರಲ್ಲಿ ಶ್ರೀಲಂಕಾ ತಂಡದ ಮುಖ್ಯ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಂಡರು.  ವಿಶ್ವಕಪ್ ಸೋಲಿನ ಬೆನ್ನಲ್ಲೇ ಶ್ರೀಲಂಕಾ ತಂಡದ ಮುಖ್ಯ ಕೋಚ್, ಸಹಾಯ ಸಿಬ್ಬಂದಿ ರಾಜಿನಾಮೆ ನೀಡುವಂತೆ ಲಂಕಾ ಕ್ರೀಡಾ ಸಚಿವರು ಆಗ್ರಹಿಸಿದ್ದರು. ಇದೀಗ ಮೊದಲ ವಿಕೆಟ್ ಪತನಕ್ಕೆ ದಿನಾಂಕ ನಿಗದಿಯಾಗಿದೆ. 

Follow Us:
Download App:
  • android
  • ios