ಕರಾ​ಚಿ(ಆ.24): ಪಾಕಿ​ಸ್ತಾನಕ್ಕೆ ನಿಧಾ​ನ​ವಾಗಿ ಅಂತಾ​ರಾ​ಷ್ಟ್ರೀಯ ಕ್ರಿಕೆಟ್‌ ವಾಪ​ಸಾ​ಗು​ತ್ತಿದೆ. ಭಯೋತ್ಪಾದಕರ ದಾಳಿಯಿಂದ ಪಾಕಿಸ್ತಾನದಲ್ಲಿ ಕ್ರಿಕೆಟ್ ಸರಣಿ ಸಂಪೂರ್ಣ ನಿಂತು ಹೋಗಿತ್ತು. ಇದೀಗ ಚೇತರಿಸಿಕೊಂಡಿರುವ ಪಾಕ್, ಪ್ರತಿ ತಂಡಕ್ಕೂ ಆಹ್ವಾನ ನೀಡುತ್ತಿದೆ. ಆದರೆ ಹಲವು ತಂಡಗಳು ನಿರಾಕರಿಸಿದರೆ, ಶ್ರೀಲಂಕಾ ಪ್ರವಾಸಕ್ಕೆ ಮುಂದಾಗಿದೆ. ಮುಂದಿನ ತಿಂಗಳು 3 ಪಂದ್ಯಗಳ ಟಿ20, 3 ಪಂದ್ಯ​ಗಳ ಏಕ​ದಿನ ಸರ​ಣಿ​ಯ​ನ್ನಾ​ಡಲು ಪಾಕಿ​ಸ್ತಾನಕ್ಕೆ ತೆರ​ಳಲು ಶ್ರೀಲಂಕಾ ಒಪ್ಪಿ​ಕೊಂಡಿದೆ. 

ಇದನ್ನೂ ಓದಿ: ಲಂಕಾ ಅಭಿಮಾನಿಗಳ ಹೃದಯ ಗೆದ್ದ ಕೇನ್ ವಿಲಿಯಮ್ಸನ್!

ಸೆ.27ರಿಂದ-ಅ.2ರ ವರೆಗೂ ಕರಾ​ಚಿ​ಯಲ್ಲಿ ಏಕ​ದಿನ ಸರ​ಣಿ ನಡೆ​ಯ​ಲಿದ್ದು, ಅ.5ರಿಂದ ಅ.9ರ ವರೆಗೂ ಲಾಹೋರ್‌ನಲ್ಲಿ ಟಿ20 ಸರಣಿ ನಡೆ​ಯ​ಲಿದೆ. 2009ರಲ್ಲಿ ತನ್ನ ಆಟ​ಗಾ​ರರ ಮೇಲೆ ಭಯೋ​ತ್ಪಾ​ದ​ಕರ ದಾಳಿ ನಡೆದ ಬಳಿಕ 8 ವರ್ಷಗಳ ಕಾಲ ಲಂಕಾ, ಪಾಕಿ​ಸ್ತಾ​ನಕ್ಕೆ ತೆರ​ಳಿ​ರ​ಲಿಲ್ಲ. ಅಲ್ಲಿ ಅಂತಾ​ರಾ​ಷ್ಟ್ರೀಯ ಕ್ರಿಕೆಟ್‌ ಸಂಪೂರ್ಣವಾಗಿ ನಿಂತು ಹೋಗಿತ್ತು. 2017ರಲ್ಲಿ ಲಂಕಾ ಟಿ20 ಸರಣಿ ಆಡಲು ಪಾಕಿ​ಸ್ತಾ​ನ ಪ್ರವಾಸ ಕೈಗೊಂಡಿತ್ತು. 2015ರಲ್ಲಿ ಜಿಂಬಾಬ್ವೆ ತಂಡ ಸಹ ಪಾಕ್‌ನಲ್ಲಿ ಸರಣಿ ಆಡಿತ್ತು.