Published : Jun 28 2017, 05:39 PM IST| Updated : Apr 11 2018, 12:51 PM IST
Share this Article
FB
TW
Linkdin
Whatsapp
Srilanka Cricket Team
ಕಳೆದೊಂದು ವರ್ಷದಲ್ಲಿ 12 ವೇಗಿಗಳ ಪೈಕಿ 9 ವೇಗಿ ಗಾಯಗೊಂಡ ಕಾರಣ, ಆಟಗಾರರು ಗಾಯದ ಸಮಸ್ಯೆಗೆ ಮೂಲ ಕಾರಣವೇನು ಎನ್ನುವುದನ್ನು ತಿಳಿದುಕೊಳ್ಳಲು ಶ್ರೀಲಂಕಾ ಕ್ರಿಕೆಟ್‌ ಸಂಸ್ಥೆ ನಿಕೊಲಾಸ್‌ ಅವರ ಸಹಾಯ ಕೋರಿತ್ತು.
ಕೊಲೊಂಬೊ(ಜೂ.28): ಶ್ರೀಲಂಕಾ ಕ್ರಿಕೆಟಿಗರು ಪದೇ ಪದೇ ಗಾಯಗೊಳ್ಳಲು ಅವರು ಚಪ್ಪಟೆ ಪಾದಗಳನ್ನು ಹೊಂದಿರುವುದೇ ಕಾರಣ, ಅಲ್ಲದೇ ಅವರೆಲ್ಲಾ ತಪ್ಪು ಅಳತೆಯ ಶೂಗಳನ್ನು ಧರಿಸುತ್ತಿದ್ದಾರೆ ಎಂದು ಆಸ್ಪ್ರೇಲಿಯಾದ ತಜ್ಞ ನಿಕೊಲಾಸ್ ಸ್ಪ್ರಿಂಗರ್ ತಮ್ಮ ಅಧ್ಯಯನದ ಮೂಲಕ ಕಂಡುಹಿಡಿದಿರುವುದಾಗಿ ಹೇಳಿದ್ದಾರೆ.
ಕಳೆದೊಂದು ವರ್ಷದಲ್ಲಿ 12 ವೇಗಿಗಳ ಪೈಕಿ 9 ವೇಗಿ ಗಾಯಗೊಂಡ ಕಾರಣ, ಆಟಗಾರರು ಗಾಯದ ಸಮಸ್ಯೆಗೆ ಮೂಲ ಕಾರಣವೇನು ಎನ್ನುವುದನ್ನು ತಿಳಿದುಕೊಳ್ಳಲು ಶ್ರೀಲಂಕಾ ಕ್ರಿಕೆಟ್ ಸಂಸ್ಥೆ ನಿಕೊಲಾಸ್ ಅವರ ಸಹಾಯ ಕೋರಿತ್ತು. ‘ಬಹುತೇಕ ಎಲ್ಲಾ ಆಟಗಾರರು ಚಪ್ಪಟೆ ಪಾದಗಳನ್ನು ಹೊಂದಿದ್ದಾರೆ. ಅವರಿಗೆ ವಿಶೇಷ ವಿನ್ಯಾಸವುಳ್ಳ ಶೂಗಳನ್ನು ಧರಿಸುವಂತೆ ಸೂಚಿಸಲಾಗಿದೆ. ಈ ಪ್ರಯೋಗ ತಂಡದ ಗಾಯಾಳು ಸಮಸ್ಯೆಯನ್ನು ಬಗೆಹರಿಸಲಿದೆ' ಎಂದು ತಜ್ಞ ನಿಕೊಲಾಸ್ ಹೇಳಿದ್ದಾರೆ.
ಕಳೆದ ಕೆಲ ತಿಂಗಳುಗಳಿಂದ ಶ್ರೀಲಂಕಾ ತಂಡದಲ್ಲಿ ಗಾಯಾಳುಗಳ ಸಮಸ್ಯೆ ಹೆಚ್ಚಾಗಿದ್ದು, ಬದಲಿ ಆಟಗಾರರನ್ನು ಹುಡುಕುವುದು ಕಷ್ಟವಾಗುತ್ತಿದೆ. ತಂಡದ ಪ್ರದರ್ಶನ ಗುಣಮಟ್ಟ ಕುಸಿಯುತ್ತಿದೆ ಎಂದು ಲಂಕಾ ಮಂಡಳಿ ಅಸಹಾಯಕತೆ ತೋಡಿಕೊಂಡಿತ್ತು. ಅಲ್ಲದೇ ದೈಹಿಕ ಕ್ಷಮತೆ ಪರೀಕ್ಷೆಯಲ್ಲಿ ಉರ್ತೀಣರಾಗದ ಯಾವ ಆಟಗಾರರನನ್ನೂ ಆಯ್ಕೆ ಮಾಡಲು ಬಿಡುವುದಿಲ್ಲ ಎಂದು ಕಳೆದ ವಾರ ಶ್ರೀಲಂಕಾದ ಕ್ರೀಡಾ ಸಚಿವ ದಯಶ್ರೀ ಜಯಶೇಖರ ಆದೇಶ ಹೊರಡಿಸಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.