ಆಫ್ಘಾನಿಸ್ತಾನ ತಂಡವು ದ್ವಿಪಕ್ಷೀಯ ಪಂದ್ಯವನ್ನಾಡಲು ಒಲವು ತೋರಿತ್ತಾದರೂ, ಇತ್ತೀಚೆಗಷ್ಟೇ ಕಾಬೂಲ್'ನಲ್ಲಿ ಭಯೋತ್ಪಾದಕರಿಂದ ನಡೆದ ಬಾಂಬ್ ದಾಳಿಯ ಹಿನ್ನೆಲೆಯಲ್ಲಿ ಆಫ್ಘಾನ್ ಕ್ರಿಕೆಟ್ ಮಂಡಳಿ ತನ್ನ ನಿರ್ಧಾರದಿಂದ ಹಿಂದೆ ಸರಿದಿತ್ತು.
ಲಾಹೋರ್(ಜು.06): ಪಾಕಿಸ್ತಾನದಲ್ಲಿ ಭದ್ರತೆ ಸಮಸ್ಯೆಯ ಕಾರಣದಿಂದಾಗಿ ದ್ವಿಪಕ್ಷೀಯ ಸರಣಿಯನ್ನಾಡಲು ಶ್ರೀಲಂಕಾ ನಿರಾಕರಿಸಿದೆ. ಈ ಮೂಲಕ ಪಾಕಿಸ್ತಾನಕ್ಕೆ ಮತ್ತೊಮ್ಮೆ ಮುಖಭಂಗವಾದಂತಾಗಿದೆ.
ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ಶ್ರೀಲಂಕಾ- ಪಾಕಿಸ್ತಾನ ನಡುವೆ ಟೆಸ್ಟ್, ಏಕದಿನ ಮತ್ತು ಟಿ20 ಪಂದ್ಯಗಳು ಆಯೋಜನೆಗೊಂಡಿದ್ದು, ಪಾಕಿಸ್ತಾನಕ್ಕೆ ಆಗಮಿಸುವಂತೆ ಲಂಕಾಗೆ ಪಾಕಿಸ್ತಾನ ಕ್ರಿಕೆಟ್ ಸಮಿತಿ ಆಹ್ವಾನ ನೀಡಿತ್ತು.
ಆದರೆ, ಭದ್ರತೆಯ ದೃಷ್ಟಿಯಿಂದಾಗಿ ಪಾಕ್ ಪ್ರವಾಸ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಲಂಕಾ ತಿಳಿಸಿದ್ದು, ಇದೀಗ ಸರಣಿ ಯುಇಎಗೆ ಸ್ಥಳಾಂತರಗೊಂಡಿದೆ. 2009ರಲ್ಲಿ ಪಾಕ್ ಪ್ರವಾಸ ಕೈಗೊಂಡಿದ್ದ ಲಂಕಾ ಆಟಗಾರರ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು. ಇದಾದ ಬಳಿಕ 2015ರಲ್ಲಿ ಜಿಂಬಾಬ್ವೆ ಹೊರತು ಪಡಿಸಿ ಇನ್ಯಾವ ರಾಷ್ಟ್ರವೂ ಪಾಕ್ ಪ್ರವಾಸ ಕೈಗೊಂಡಿಲ್ಲ.
ಆಫ್ಘಾನಿಸ್ತಾನ ತಂಡವು ದ್ವಿಪಕ್ಷೀಯ ಪಂದ್ಯವನ್ನಾಡಲು ಒಲವು ತೋರಿತ್ತಾದರೂ, ಇತ್ತೀಚೆಗಷ್ಟೇ ಕಾಬೂಲ್'ನಲ್ಲಿ ಭಯೋತ್ಪಾದಕರಿಂದ ನಡೆದ ಬಾಂಬ್ ದಾಳಿಯ ಹಿನ್ನೆಲೆಯಲ್ಲಿ ಆಫ್ಘಾನ್ ಕ್ರಿಕೆಟ್ ಮಂಡಳಿ ತನ್ನ ನಿರ್ಧಾರದಿಂದ ಹಿಂದೆ ಸರಿದಿತ್ತು.