ಭಾರತ ಗೆಲ್ಲಲು 5 ವಿಕೆಟ್ ಅಗತ್ಯವಿದ್ದರೆ, ಶ್ರೀಲಂಕಾ ಚೊಚ್ಚಲ ಜಯ ಕಾಣಲು ಇನ್ನೂ 184 ರನ್ ಗಳಿಸಬೇಕಿದೆ.
ನವದೆಹಲಿ(ಡಿ.06): ಭಾರತ-ಶ್ರೀಲಂಕಾ ನಡುವಿನ ಮೂರನೇ ಹಾಗೂ ಕೊನೆಯ ಟೆಸ್ಟ್ ರೋಚಕ ಹಂತ ತಲುಪಿದ್ದು ಶ್ರೀಲಂಕಾ ಚಹಾ ವಿರಾಮದ ವೇಳೆಗೆ 5 ವಿಕೆಟ್ ಕಳೆದುಕೊಂಡು 184 ರನ್ ಕಲೆಹಾಕಿದ್ದು, ಗೆಲ್ಲಲು 184 ರನ್'ಗಳ ಅವಶ್ಯಕತೆಯಿದೆ.
ನಾಲ್ಕನೇ ದಿನದಾಟ ಮುಕ್ತಾಯಕ್ಕೆ 3 ವಿಕೆಟ್'ಗೆ 31 ರನ್ ಬಾರಿಸಿದ್ದ ಶ್ರೀಲಂಕಾ ಇಂದು ದಿಟ್ಟ ಆಟ ಪ್ರದರ್ಶಿಸುತ್ತಿದೆ. ಧನಂಜಯ್ ಡಿ ಸಿಲ್ವಾ ನೆಲಕಚ್ಚಿ ಆಡುವ ಮೂಲಕ ಶತಕ ಸಿಡಿಸಿದರೆ(119*) ತಾಳ್ಮೆಯ ಆಟ ಪ್ರದರ್ಶಿಸಿದ ನಾಯಕ ಚಾಂಡಿಮಲ್(36) ಹಾಘೂ ರೊಶನ್ ಸಿಲ್ವಾ(38*)ರನ್ ಗಳಿಸಿದ್ದಾರೆ.
ಧನಂಜಯ್ ಡಿಸಿಲ್ವಾ 119 ರನ್ ಬಾರಿಸಿ ರಿರ್ಟೈರ್ಡ್ ಹರ್ಟ್ ಆಗಿದ್ದು, ಕೊನೆಯ ಸೆಷನ್ ಸಾಕಷ್ಟು ಕುತೂಹಲ ಮೂಡಿಸಿದೆ.
ಭಾರತ ಗೆಲ್ಲಲು 5 ವಿಕೆಟ್ ಅಗತ್ಯವಿದ್ದರೆ, ಶ್ರೀಲಂಕಾ ಚೊಚ್ಚಲ ಜಯ ಕಾಣಲು ಇನ್ನೂ 184 ರನ್ ಗಳಿಸಬೇಕಿದೆ.
