ಮಾಧ್ಯಮಗಳಿಗೆ ಹೇಳಿಕೆ ನೀಡುವ ಸಂದರ್ಭದಲ್ಲಿ ಮಾಲಿಂಗ, ಕ್ರೀಡಾ ಸಚಿವ ದಯಾಸಿರಿ ಜಯಸೇಖರ ಅವರಿಗೆ ಕ್ರಿಕೆಟ್ ಬಗ್ಗೆ ಮಂಗನಿಗೇನು ಗೊತ್ತು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಕೊಲಂಬೊ(ಜೂ.22): ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಪ್ರವೇಶಿಸದ ಶ್ರೀಲಂಕಾದ ಕ್ರಿಕೆಟ್ ಆಟಗಾರರ ಸಾಮರ್ಥ್ಯದ ಬಗ್ಗೆ ಟೀಕಿಸಿದ್ದ ಲಂಕಾದ ಕ್ರೀಡಾ ಸಚಿವರನ್ನು ‘ಕೋತಿ’ಗೆ ಹೋಲಿಕೆ ಮಾಡಿದ ಪ್ರಕರಣ ಸಂಬಂಧ ಶ್ರೀಲಂಕಾದ ವೇಗಿ ಲಸಿತಾ ಮಾಲಿಂಗ ಅವರನ್ನು ವಿಚಾರಣೆ ನಡೆಸಲಾಯಿತು.
ಮಾಧ್ಯಮಗಳಿಗೆ ಹೇಳಿಕೆ ನೀಡುವ ಸಂದರ್ಭದಲ್ಲಿ ಮಾಲಿಂಗ, ಕ್ರೀಡಾ ಸಚಿವ ದಯಾಸಿರಿ ಜಯಸೇಖರ ಅವರಿಗೆ ಕ್ರಿಕೆಟ್ ಬಗ್ಗೆ ಮಂಗನಿಗೇನು ಗೊತ್ತು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಇದನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು, ಹೇಳಿಕೆ ಕುರಿತು ತನಿಖೆ ನಡೆಸುವಂತೆ ಸೂಚಿಸಿದ್ದರು. ‘ನಾನು ಯಾವುದೇ ಒಬ್ಬ ಆಟಗಾರರನ್ನು ಉದ್ದೇಶಿಸಿ ಟೀಕೆ ಮಾಡಿರಲಿಲ್ಲ. ಎಲ್ಲಾ ಆಟಗಾರರ ದೈಹಿಕ ಸಾಮರ್ಥ್ಯದ ಬಗ್ಗೆ ಟೀಕಿಸಿದ್ದೆ. ಮಾಲಿಂಗ ಹೆಸರನ್ನು ಎಲ್ಲಿಯೂ ಬಳಸಿರಲಿಲ್ಲ. ಆದರೆ, ಅವರು ಸಾರ್ವಜನಿಕವಾಗಿ ನನ್ನನ್ನು ಹೀಯ್ಯಾಳಿಸಿದ್ದಾರೆ. ಎಂದು ಕ್ರೀಡಾ ಸಚಿವ ದಯಾಸಿರಿ ಜಯಸೇಖರ ತಿಳಿಸಿದ್ದಾರೆ.