ಕೊಲಂಬೊ(ಅ.14): ಪಾಕಿಸ್ತಾನ ವಿರುದ್ಧ ಸದ್ಯ ಯುಎಇನಲ್ಲಿ ಸೀಮಿತ ಓವರ್ ಸರಣಿ ಚಾಲ್ತಿಯಲ್ಲಿದ್ದು, ಏಕದಿನ ಸರಣಿ ಬಳಿಕ 3 ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಈ ಸರಣಿಯ 3ನೇ ಹಾಗೂ ಕೊನೆ ಪಂದ್ಯ ಲಾಹೋರ್‌'ನಲ್ಲಿ ನಡೆಯಬೇಕಿದ್ದು, ಪಾಕಿಸ್ತಾನಕ್ಕೆ ತೆರಳಲು ಶ್ರೀಲಂಕಾ ಆಟಗಾರರು ನಿರಾಕರಿಸಿದ್ದಾರೆ.

ಇದೇ ತಿಂಗಳ 29ರಂದು ನಡೆಯಬೇಕಿರುವ ಪಂದ್ಯವನ್ನು ಲಾಹೋರ್‌'ನಿಂದ ಸ್ಥಳಾಂತರಿಸಲು ಸದ್ಯ ಸರಣಿಯಲ್ಲಿ ಆಡುತ್ತಿರುವ ಆಟಗಾರರು ಸೇರಿದಂತೆ ಗುತ್ತಿಗೆ ಹೊಂದಿರುವ ಒಟ್ಟು 40 ಆಟಗಾರರು ಶ್ರೀಲಂಕಾ ಕ್ರಿಕೆಟ್ ಮಂಡಳಿಗೆ ಪತ್ರ ಬರೆದಿದ್ದಾರೆ.

ಇತ್ತೀಚೆಗಷ್ಟೇ ವಿಶ್ವ ಇಲೆವನ್ ತಂಡವು ಪಾಕಿಸ್ತಾನದಲ್ಲಿ 3 ಟಿ20 ಪಂದ್ಯಗಳನ್ನಾಡಿತ್ತು. 2009ರಲ್ಲಿ ಶ್ರೀಲಂಕಾ ಆಟಗಾರರಿದ್ದ ಬಸ್ ಮೇಲೆ ಉಗ್ರರು ದಾಳಿ ನಡೆಸಿದ ನಂತರ ಪಾಕಿಸ್ತಾನದ ನೆಲದಲ್ಲಿ ಕ್ರಿಕೆಟ್ ಆಡಲು ಯಾವ ತಂಡವು ಮುಂದೆ ಬರುತ್ತಿಲ್ಲ.