ಕೋಲಬೋ(ಸೆ.20): ರಸ್ತೆ ಅಪಘಾತದಲ್ಲಿ ಬೈಕ್ ಸವಾರನ ಸಾವಿಗೇ ಕಾರಣವಾದ ಶ್ರೀಲಂಕಾದ ಖ್ಯಾತ ಕ್ರಿಕೆಟಿಗ ನವಾನ್ ಕುಲಶೇಖರ ಅವರನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ. 

ಮಾರಣಾಂತಿಕ ರಸ್ತೆ ಅಪಘಾತದಲ್ಲಿ ಕುಲಶೇಖರ ಭಾಗಿಯಾಗಿದ್ದ ಹಿನ್ನಲೆಯಲ್ಲಿ ಅವರನ್ನು ಬಂಧಿಸಿ, ಷರತ್ತು ಬದ್ಧ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಕೋಲಬೋ ಪೊಲೀಸರು ತಿಳಿಸಿದ್ದಾರೆ. 

ಸೋಮವಾರ ಜರುಗಿದ ರಸ್ತೆ ಅಪಘಾತವೊಂದರಲ್ಲಿ ನವಾನ್ ಕುಲಶೇಖರ ಚಲಾಯಿಸುತ್ತಿದ್ದ ಕಾರು, ಬೈಕೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಕುಲಶೇಖರ ಅವರನ್ನು ಬಂಧಿಸಿ ಬಿಡುಗಡೆಗೊಳಿಸಲಾಗಿದೆ. 

ಕೋಲಬೋದ ಎ-1 ಹೈವೇ ನಲ್ಲಿ ಕುಲಶೇಖರ ಕಾರು ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿತ್ತು ಎನ್ನಲಾಗಿದೆ. 34 ವರ್ಷದ ನವಾನ್ ಕುಲಶೇಖರ ಶ್ರೀಲಂಕಾ ತಂಡದ ಭರವಸೆಯ ಬೌಲರ್. ಜೂನ್ ನಲ್ಲಿ ಟೆಸ್ಟ್ ಕ್ರಿಕೆಟ್'ಗೆ ನಿವೃತ್ತಿ ಘೋಷಿಸಿರುವ ಕುಲಶೇಖರ್ ಸದ್ಯ ಟಿ-20 ಮತ್ತು ಏಕದಿನ ಪಂದ್ಯಗಳ ಬಗ್ಗೆ ಗಮನ ಹರಿಸಿದ್ದಾರೆ.