‘ನವೆಂಬರ್‌ನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಸರಣಿ ನನ್ನ ವೃತ್ತಿ ಜೀವನದ ಅಂತಿಮ ಸರಣಿ ಎನಿಸುತ್ತಿದೆ. ಪ್ರತಿ ಕ್ರಿಕೆಟಿಗನಿಗೂ ಸಮಯ ನಿಗದಿಯಾಗಿರುತ್ತದೆ. ಸಮಯ ಬಂದಾಗ ನಿವೃತ್ತಿ ಘೋಷಿಸಿ ಹೊರನಡೆಯುವುದು ಸೂಕ್ತ’ ಎಂದು ಹೆರಾತ್ ಹೇಳಿದ್ದಾರೆ.
ಗಾಲೆ[ಜು.12]: ಶ್ರೀಲಂಕಾ ಟೆಸ್ಟ್ ತಂಡದ ಮಾಜಿ ನಾಯಕ ರಂಗನಾ ಹೆರಾತ್, ನವೆಂಬರ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವ ಸೂಚನೆ ನೀಡಿದ್ದಾರೆ. ಹೆರಾತ್, ಇಂದಿನಿಂದ
ಆರಂಭವಾಗಿರುವ ದಕ್ಷಿಣ ಆಫ್ರಿಕಾ ವಿರುದ್ಧದ 2 ಟೆಸ್ಟ್‌ಗಳ ಸರಣಿಗಾಗಿ ಸಜ್ಜಾಗಿದ್ದಾರೆ.
‘ನವೆಂಬರ್‌ನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಸರಣಿ ನನ್ನ ವೃತ್ತಿ ಜೀವನದ ಅಂತಿಮ ಸರಣಿ ಎನಿಸುತ್ತಿದೆ. ಪ್ರತಿ ಕ್ರಿಕೆಟಿಗನಿಗೂ ಸಮಯ ನಿಗದಿಯಾಗಿರುತ್ತದೆ. ಸಮಯ ಬಂದಾಗ ನಿವೃತ್ತಿ ಘೋಷಿಸಿ ಹೊರನಡೆಯುವುದು ಸೂಕ್ತ’ ಎಂದು ಹೆರಾತ್ ಹೇಳಿದ್ದಾರೆ.
ಹೆರಾತ್, ಲಂಕಾದ ಅತ್ಯಂತ ಯಶಸ್ವಿ ಟೆಸ್ಟ್ ಬೌಲರ್‌ಗಲ್ಲಿ ಒಬ್ಬರಾಗಿದ್ದು, 90 ಪಂದ್ಯಗಳನ್ನಾಡಿ 414 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅತಿ ಹೆಚ್ಚು ವಿಕೆಟ್ ಪಡೆದಿರುವ ಎಡಗೈ ಸ್ಪಿನ್ನರ್ ಕೂಡ ಎನಿಸಿದ್ದಾರೆ. ಅವರು 2016ರಲ್ಲಿ ಸೀಮಿತ ಓವರ್‌ಗಳ ಕ್ರಿಕೆಟ್’ನಿಂದ ನಿವೃತ್ತಿ ಹೊಂದಿದ್ದರು.