ಕೊಲಂಬೊ(ಸೆ.02): ಭಾರತ ವಿರುದ್ಧ ನಾಲ್ಕನೇ ಏಕದಿನ ಸೋಲುತ್ತಿದ್ದಂತೆ ಶ್ರೀಲಂಕಾ ತಂಡ 2019ರ ಐಸಿಸಿ ವಿಶ್ವಕಪ್'ಗೆ ನೇರ ಅರ್ಹತೆ ಪಡೆಯುವಲ್ಲಿ ವಿಫಲವಾಯಿತು.

ಲಂಕಾ, ಸದ್ಯ ನಡೆಯುತ್ತಿರುವ ಸರಣಿಯಲ್ಲಿ ಕನಿಷ್ಠ 2 ಪಂದ್ಯಗಳನ್ನು ಗೆಲ್ಲಬೇಕಿತ್ತು. ವಿಶ್ವಕಪ್‌'ಗೆ ನೇರ ಅರ್ಹತೆ ಗಿಟ್ಟಿಸಲು ಲಂಕಾ, ಸದ್ಯ ವೆಸ್ಟ್ ಇಂಡೀಸ್ ತಂಡದ ಫಲಿತಾಂಶಕ್ಕಾಗಿ ಕಾಯಬೇಕಿದೆ.

ವಿಂಡೀಸ್ ಐರ್ಲೆಂಡ್ ವಿರುದ್ಧ ಒಂದು ಹಾಗೂ ಇಂಗ್ಲೆಂಡ್ ವಿರುದ್ಧ 5 ಏಕದಿನ ಪಂದ್ಯಗಳನ್ನಾಡಲಿದೆ. ಆರು ಪಂದ್ಯಗಳನ್ನು ಗೆದ್ದರೆ ಮಾತ್ರ ವಿಂಡೀಸ್‌'ಗೆ ನೇರ ಅರ್ಹತೆ ಸಿಗಲಿದೆ. ಇಲ್ಲವಾದಲ್ಲಿ ಆ ಅವಕಾಶ ಶ್ರೀಲಂಕಾ ಪಾಲಾಗಲಿದೆ.