ಹೈದರಾಬಾದ್(ಮೇ.07):  ಹೈದರಾಬಾದ್ ವಿರುದ್ಧ 5 ರನ್'ಗಳ ವಿರೋಚಿತ ಸೋಲಿನೊಂದಿಗೆ ಆರ್'ಸಿಬಿ ಪ್ಲೇಆಫ್ ಕನಸು ನುಚ್ಚುನೂರಾಗಿದೆ.  8 ಪಂದ್ಯಗಳನ್ನು ಗೆದ್ದ ಸನ್ ರೈಸರ್ಸ್ ಅಧಿಕೃತವಾಗಿ ಪ್ಲೇಆಫ್ ಹಂತ ಪ್ರವೇಶಿಸಿದೆ.
ಹೈದರಾಬಾದ್ ಒಡ್ಡಿದ್ದ ಸಾಧಾರಣ 146 ರನ್'ಗಳ ಗುರಿಗೆ ಬೆಂಗಳೂರು ತಂಡ 141 ಗಳಿಸಲಷ್ಟೆ ಶಕ್ತವಾಯಿತು. ಒಂದಿಷ್ಟು ಪ್ರತಿರೊಧ ತೋರಿದ ನಾಯಕ ಕೊಹ್ಲಿ(39) ಹಾಗೂ ಗ್ರಾಂಡ್'ಹೋಮ್(33) ಹಾಗೂ ಮನ್ದೀಪ್ ಸಿಂಗ್ ಆಟ ವ್ಯರ್ಥವಾಯಿತು.  ಸನ್ ರೈಸರ್ಸ್ ಪರ ಶಕೀಬ್ 36/2 ವಿಕೇಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.      
ಇದಕ್ಕೂ ಮುನ್ನ ಟಾಸ್ ಗೆದ್ದ ವಿರಾಟ್ ಕೊಹ್ಲಿ ಹೈದರಾಬಾದ್ ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿದರು. ಅರ್ಧ ಶತಕ ಗಳಿಸದ ಕೇನ್,  ಉಮೇಶ್ ಯಾದವ್ ಬೌಲಿಂಗ್'ನಲ್ಲಿ ಔಟಾದರು. 39 ಚಂಡುಗಳಲ್ಲಿ 56 ರನ್ ಬಾರಿಸಿದ ಅವರ ಆಟದಲ್ಲಿ 5 ಬೌಂಡರಿ ಹಾಗೂ 2 ಸಿಕ್ಸ್'ಗಳಿದ್ದವು.  ಶಕೀಬ್ ಕೂಡ 32 ಬಾಲ್'ಗಳಲ್ಲಿ 35 ರನ್ ಬಾರಿಸಿದ್ದರು.
ಬೆಂಗಳೂರು ಪರ ಸೌತಿ ಹಾಗೂ ಸಿರಾಜ್ ತಲಾ 2 ವಿಕೇಟ್ ಪಡೆದರೆ, ಯಾದವ್ ಹಾಗೂ ಚಾಹಲ್ ತಲಾ ಒಂದು ವಿಕೇಟ್ ಪಡೆದರು. 

ಸ್ಕೋರ್
ಸನ್ ರೈಸರ್ರ್‌ ಹೈದರಾಬಾದ್ 20 ಓವರ್'ಗಳಲ್ಲಿ 147
(ಕೇನ್ ವಿಲಿಯಮ್ಸ್'ನ್ 56, ಶಕೀಬ್ 35, ಸೌತಿ 26/2 )

ಆರ್'ಸಿಬಿ 20 ಓವರ್'ಗಳಲ್ಲಿ 141
(ವಿರಾಟ್ 39,ಶಕೀಬ್ 36/2 )

ಫಲಿತಾಂಶ: ಸನ್ ರೈಸರ್ರ್‌ ಹೈದರಾಬಾದ್'ಗೆ 5 ರನ್'ಗಳ ಜಯ