ವಿಶಾಖಪಟ್ಟಣಂ(ಮೇ.09): ಸನ್‌ರೈಸರ್ಸ್ ಹೈದರಾಬಾದ್ ವಿರುದ್ದ ರೋಚಕ ಎಲಿಮಿನೇಟರ್ ಪಂದ್ಯದಲ್ಲಿ ಅಮಿತ್ ಮಿಶ್ರಾ ರನೌಟ್ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ರನ್‌ಗಾಗಿ ಒಡಿದ ಅಮಿತ್ ಮಿಶ್ರಾ ರನೌಟ್ ತಪ್ಪಿಸಲು ವಿಕೆಟ್‌ಗೆ ಅಡ್ಡ ಬಂದಿದ್ದರು. ನಿಯಮ ಮೀರಿದ ಮಿಶ್ರಾ ವಿರುದ್ಧ ರನೌಟ್ ತೀರ್ಪು ನೀಡಲಾಗಿತ್ತು. ಮಿಶ್ರಾ ರನೌಟ್ ಇದೀಗ ಟ್ವಿಟರ್‌ನಲ್ಲಿ ಫುಲ್ ಟ್ರೋಲ್ ಆಗಿದೆ.