24ವರ್ಷಗಳ ಕಾಲ ಕ್ರಿಕೆಟ್ ಜಗತ್ತನ್ನಾಳಿದ ವಾಮನಮೂರ್ತಿ ಸಚಿನ್ ತೆಂಡೂಲ್ಕರ್'ಗೆ ದಿಗ್ಗಜ ಕ್ರೀಡಾ ತಾರೆಗಳು ಹುಟ್ಟುಹಬ್ಬದ ಶುಭಕೋರಿದ್ದು ಹೀಗೆ..
ಬೆಂಗಳೂರು(ಏ.24): ಕ್ರಿಕೆಟ್ ದಂತಕಥೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಇಂದು 44ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಸಚಿನ್'ಗೆ ಭರಪೂರ ಹುಟ್ಟುಹಬ್ಬದ ಶುಭಾಶಯಗಳು ಹರಿದು ಬರುತ್ತಿವೆ.
ಕ್ರಿಕೆಟ್ ಒಂದು ಧರ್ಮ ಎಂದಾದರೆ, ಸಚಿನ್ ಅದಕ್ಕೆ ದೇವರು ಎನ್ನುವ ಮಾತೊಂದಿದೆ. ಏಪ್ರಿಲ್ 24, 1973ರಲ್ಲಿ ಮುಂಬೈ'ನಲ್ಲಿ ಜನಿಸಿದ ಸಚಿನ್ ತೆಂಡೂಲ್ಕರ್ 200 ಟೆಸ್ಟ್ ಪಂದ್ಯ, 100 ಅಂತರಾಷ್ಟ್ರೀಯ ಶತಕ ಸೇರಿದಂತೆ ಅಸಂಖ್ಯಾತ ದಾಖಲೆಗಳನ್ನು ನಿರ್ಮಿಸಿದ್ದಾರೆ.
ಸಚಿನ್ ಜೀವನಾಧಾರಿತ ಸಿನಿಮಾ "ಸಚಿನ್: ಎ ಬಿಲಿಯನ್ ಡ್ರೀಮ್ಸ್" ಮೇ 26ರಂದು ತೆರೆಕಾಣಲಿದ್ದು ಅಭಿಮಾನಿಗಳು ಚಿತ್ರ ನೋಡಲು ತುದಿಗಾಲಿನಲ್ಲಿ ನಿಂತಿದ್ದಾರೆ.
24ವರ್ಷಗಳ ಕಾಲ ಕ್ರಿಕೆಟ್ ಜಗತ್ತನ್ನಾಳಿದ ವಾಮನಮೂರ್ತಿ ಸಚಿನ್ ತೆಂಡೂಲ್ಕರ್'ಗೆ ದಿಗ್ಗಜ ಕ್ರೀಡಾ ತಾರೆಗಳು ಹುಟ್ಟುಹಬ್ಬದ ಶುಭಕೋರಿದ್ದು ಹೀಗೆ..